
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದ ಯೋಧನೋರ್ವ ರಾಜಸ್ಥಾನದ ಬಟಾಲಿಯನದಲ್ಲಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಭಾರತೀಯ ಸೇನೆಯಲ್ಲಿ ಕಳೆದ ೨೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜಲಾಲುದ್ದಿನ್ ಮಕಬುಲ ಅಮ್ಮಣಗಿ (೪೪ ) ಸಧ್ಯ ರಾಜಸ್ಥಾನದಲ್ಲಿ ೭೦ ಬಟಾಲಿಯನ್‌ದಲ್ಲಿ ಸುಬೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಯೋಧ ತಾಯಿ, ಪತ್ನಿ ಹಾಗೂ ಪುತ್ರಿ, ಪುತ್ರರನ್ನು ಅಗಲಿದ್ದಾರೆ. ಮೃತರ ಕುಟುಂಬವು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೊಡ್ಡ ಕುಟುಂಬ. ತಂದೆ ಮಕಬುಲ್‌ಸಾಬ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಗೊಂಡು ನಿಧನರಾಗಿದ್ದು ಹಿರಿಯ ಸಹೋದರ ಅಲ್ಲಾವುದ್ದಿನ್ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
೨೨ ವರ್ಷ ಸೇವೆ ಸಲ್ಲಿಸಿದ್ದ ಯೋಧ ಜಲಾಲುದ್ದಿನ್ ಬರುವ ಜನೇವರಿ ತಿಂಗಳಿನಲ್ಲಿ ನಿವೃತ್ತಿಗೊಳ್ಳಲಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬುಧವಾರ ಮುಂಜಾನೆ ಪಾರ್ಥಿವ ಶರೀರ ಸ್ವಗ್ರಾಮ ಶಿರಹಟ್ಟಿ ಬಿಕೆ ಗ್ರಾಮಕ್ಕೆ ಆಗಮಿಸಲಿದೆ. ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಸಕಲ ಸಿಧ್ದತೆ ಮಾಡಲಾಗಿದೆ. ನಂತರ ಖಬರಸ್ಥಾನದಲ್ಲಿ ಸರಕಾರಿ ಗೌರವದೊಂದಿಗೆ ಅಂತಿಮಕ್ರಿಯೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ