Kannada NewsKarnataka NewsLatest
ಶಬರಿ ಕೊಳ್ಳದಲ್ಲಿ ಮುಳುಗಿ ಯುವಕರಿಬ್ಬರ ಸಾವು

https://www.youtube.com/watch?v=86YeuYGG1t4
ಪ್ರಗತಿವಾಹಿನಿ ಸುದ್ದಿ, ರಾಮದುರ್ಗ -ಶಬರಿ ಕೊಳ್ಳದಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ಸಾವಿಗೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಘಟನೆ ನಡೆದಿದೆ.
ಸುರೇಬಾನ ಗ್ರಾಮದ ಬಳಿ ಇರುವ ಶಬರಿ ಕೊಳ್ಳದಲ್ಲಿ 20 ವರ್ಷದ ಯುವಕರಿಬ್ಬರು ಈಜಲು ಹೋಗಿದ್ದರು.
ವಿನಾಯಕ ಶಿವಾನಂದ ಶಿರೂರ (೨೦) ಮತ್ತು ಹರ್ಷ ಅಪ್ಪನ್ನವರ್ (೨೦) ಸಾವನ್ನಪ್ಪಿದ ಯುವಕರು.
ಯುವಕರ ಸಾವಿನಿಂದಾಗಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸುರೇಬಾನ ಉಪ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




