
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕ್ಷೇತ್ರದ ಸಹಕಾರ ಮತ್ತು ರಾಜಕೀಯ ರಂಗದ ಪರಿಣಿತರೊಂದಿಗೆ ಚರ್ಚಿಸಿದ ಬಳಿಕ ಸಂವಿಧಾನ ಶಿಲ್ಪಿಯ ಜಯಂತಿಯಂದು (ಏ.14) ತಮ್ಮ ಮುಂದಿನ ರಾಜಕೀಯ ನಡೆಯ ನಿರ್ಥಾರವನ್ನು ಪ್ರಕಟಿಸುವುದಾಗಿ ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದರು.
ಬುಧವಾರ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ತಮಗೆ ಟಿಕೆಟ್ ನೀಡದ್ದರಿಂದ ನಿರಾಸೆಯಾಗಿದೆ. ಇದರಿಂದ ಮನನೊಂದ ತಾವು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಬೆಂಬಲಿಗರ ಹಾಗೂ ಅನುಯಾಯಿಗಳ ಅಭಿಪ್ರಾಯ ಸಂಗ್ರಹಿಸಲಿದ್ದು, ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ಯೋಜನೆ ರೂಪಿಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಜಿಪಂ ಸದಸ್ಯ ಬಾಬುರಾವ್ ದೇಸಾಯಿ, ಮಂಜುಳಾ ಕಾಪಸೆ, ಮಲ್ಲಪ್ಪ ಮಾರಿಹಾಳ, ಮಹಾರುದ್ರಯ್ಯ ಹಿರೇಮಠ, ಸಂಜಯ ಹಲಗೇಕರ, ವಿಠ್ಠಲ ಹಿಂಡಲಕರ, ಮಹಾಂತೇಶ ಸಾಣಿಕೊಪ್ಪ ಹಾಗೂ ಇತರರು ಅರವಿಂದ ಪಾಟೀಲ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ