ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ, ಆದರೆ ವಿಶ್ವನಾಥ್ ಗೆ ಮಂತ್ರಿ ಮಾಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೆದ್ದ 10 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿರುವ ಬೆನ್ನಲ್ಲೇ ಶಾಸಕ ಮಹೇಶ್ ಕುಮಟಳ್ಳಿ ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ. ಆದರೆ ಸೋತ ವಿಶ್ವನಾಥ್ ಗೆ ಮಂತ್ರಿ ಸ್ಥಾನ ಕೊಡಿ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಟಳ್ಳಿ, ನಾನು ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಆದರೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದೆ ಹೋದರೆ ಜನರ ದೃಷ್ಟಿಯಲ್ಲಿ ಕೆಟ್ಟ ಸಂದೇಶ ಹೋಗುತ್ತೆ ಅಂತ ತಿಳಿಸಿದ್ರು. ಒಂದು ವೇಳೆ ನಾನು ತ್ಯಾಗ ಮಾಡಬೇಕು ಅಂದ್ರೆ ಮಾಡಲು ಸಿದ್ಧ. ಆದರೆ ಸೋತ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಷರತ್ತು ಹಾಕಿದರು.

ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಮಾಡಿದ್ರು. ವಿಶ್ವನಾಥ್ ರನ್ನ ಯಾಕೆ ಮಾಡಬಾರದು ಅಂತ ಸವದಿ ಹೆಸರು ಮುಂದಿಟ್ಟು ಪ್ರಶ್ನೆ ಮಾಡಿದ್ರು. ಉಪ ಚುನಾವಣೆ ರಾಜಕೀಯ ಸನ್ನಿವೇಶದಿಂದ ಆಗಿದೆ. ಹೀಗಾಗಿ ಇಬ್ಬರು ಸೋತರು ಅಂತ ಮಾತಾಡೋದು ಬೇಡ. ನಾನು ಬಿಜೆಪಿ ಕಚೇರಿಯಲ್ಲಿ ಕಸಬೇಕಾದರು ಗುಡಿಸೋಕೆ ಸಿದ್ಧ. ಪಕ್ಷ ಸಂಘಟನೆ ಮಾಡೋಕು ಸಿದ್ಧ. ಆದರೆ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಮಹೇಶ್ ಕುಮಟಳ್ಳಿ ಒತ್ತಾಯಿಸಿದರು

ಸಿಎಂ ಯಡಿಯೂರಪ್ಪ ಚುನಾವಣೆ ವೇಳೆ 35 ಸಾವಿರ ಜನರ ಮುಂದೆ ನನ್ನನ್ನು ಶ್ರೀಮಂತ ಪಾಟೀಲ್ ರನ್ನ ಮಂತ್ರಿ ಮಾಡ್ತೀನಿ ಅಂತ ಮಾತು ಕೊಟ್ಟಿದ್ರು. ಯಡಿಯೂರಪ್ಪ ಮಾತು ತಪ್ಪೋದಿಲ್ಲ ಅಂತ ವಿಶ್ವಾಸ ಇದೆ ಎಂದು ಹೇಳಿದರು.

Home add -Advt

Related Articles

Back to top button