Life Style

*ನಾಟ್ಯ ವಿಶಾರದೆ ದೀಪರಾಣಿ ಭರತನಾಟ್ಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜು*

ಪ್ರಗತಿವಾಹಿನಿ ಸುದ್ದಿ: ನೃತ್ಯ ದಿಶಾ ಟ್ರಸ್ಟ್ ರೂವಾರಿ ‘ಕಲಾಭೂಷಿಣಿ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ದೀಪರಾಣಿ “ಭರತನಾಟ್ಯ ರಂಗ ಪ್ರವೇಶ”ಕ್ಕೆ ಅಣೆಯಾಗಿದ್ದಾರೆ.

ಇದೇ ಫೆಬ್ರವರಿ 21, ಶುಕ್ರವಾರ ಸಂಜೆ 5:00 ಗಂಟೆಗೆ ಬೆಂಗಳೂರು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಪ್ರವೇಶ ಆಯೋಜಿಸಲಾಗಿದೆ. .

ಭರವಸೆಯ ಪ್ರತಿಭೆ : ನಾಟ್ಯ ವಿಶಾರದೆ ದೀಪರಾಣಿ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್, ಸೀನಿಯರ್, ವಿದ್ವತ್ ಹಾಗೂ ಗಂಧರ್ವ ಪರೀಕ್ಷೆ ವಿಶಾರದ ಪೂರ್ಣಗಳನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ವಿದ್ವತ್ ಅಂತ್ಯ ತಯಾರಿಯಲ್ಲಿರುವ ದೀಪ ಭರವಸೆಯ ನೃತ್ಯ ಕಲಾವಿದೆ.

Home add -Advt

ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ದೀಪ ಸಂಸ್ಥೆಯ ನೃತ್ಯ ಸಂಭ್ರಮ ಒಳಗೊಂಡು ಹಂಪಿ ಉತ್ಸವ, ದಸರಾ ಉತ್ಸವ, ದುಬೈನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ, G20 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಇವರ ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ||.ಎಂ. ಸೂರ್ಯಪ್ರಸಾದ್, ಕಲಾಮಂಡಲಂ ಗುರು ಉಷಾ ದಾತಾರ್ ಹಾಗೂ ಮಂಜುನಾಥ್ ಡಿ.ಕೆ. ಆಗಮಿಸಲಿದ್ದಾರೆ.


ದೀಪ ರಂಗ ಪ್ರವೇಶ ಪ್ರಸ್ತುತಿಗೆ ಗುರು ಡಾ|| ದರ್ಶನಿ ಮಂಜುನಾಥ್ (ನಟ್ಟುವಾಂಗ), ವಿದುಷಿ ಭಾರತಿ ವೇಣುಗೋಪಾಲ್ (ಗಾಯನ ), ವಿದ್ವಾನ್ ಎಸ್.ವಿ. ಗಿರಿಧರ್ (ಮೃದಂಗ ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು), ವಿದ್ವಾನ್ ಕಾರ್ತಿಕ ವೈಧಾತ್ರಿ (ರಿದಂ ಪ್ಯಾಡ್) ಹಾಗೂ ಮಾಸ್ಟರ್ ಅಚ್ಯುತ್ ಜಗದೀಶ್ (ವೀಣೆ) ಸಹಕರಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button