*ದೀಪಾವಳಿಗೆ ಬೆಂಗಳೂರಿನಿಂದ ಬೆಳಗಾವಿ ಹಾಗೂ ಈ ನಗರಕ್ಕೆ ವಿಶೇಷ ರೈಲು*
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ದೀಪಾವಳಿ ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಎರಡು ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.
ದೀಪಾವಳಿ ಹಬ್ಬಕ್ಕೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ನೈರುಟ್ಯ ರೈಲ್ವೆ ನಿರ್ಧರಿಸಿದೆ. ಸರ್.ಎಂ.ವಿಶ್ವೇಷ್ವರಯ್ಯ ತರ್ಮಿನಲ್ ಬೆಂಗಳೂರು- ವಿಜಯಪುರ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಟರ್ಮಿನಲ್ ಬೆಂಗಳೂರು-ಬೆಳಗಾವಿ ನಡುವೆ ಈ ರೈಲುಗಳು ಸಂಚರಿಸಲಿವೆ.
ರೈಲು ಸಂಖ್ಯೆ 06231 ಎಸ್ ಎಂ ವಿಟಿ ಬೆಂಗಳೂರು-ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 10ರಂದು ಸಂಜೆ ಹೊರಟು ಮರುದಿನ ಬೆಳಿಗ್ಗೆ 10:55ಕ್ಕೆ ವಿಜಯಪುರ ತಲುಪಲಿದೆ.
ರೈಲು ಸಂಖ್ಯೆ 06232 ವಿಜಯಪುರ – ಎಸ್ ಎಂ ವಿಟಿ ಬೆಂಗಳೂರು ರೈಲು ನವೆಂಬರ್ 14ರಂದು ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 9:30ಕ್ಕೆ ಎಸ್ ಎಂ ವಿಟಿ ಬೆಂಗಳೂರಿಗೆ ಆಗಮಿಸಲಿದೆ.
ರೈಲು ಸಂಖ್ಯೆ 06585 ಎಸ್.ವಿ.ಟಿ ಬೆಂಗಳೂರು- ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 10 ರಂದು ರಾತ್ರಿ 8 ಗಂಟೆಗೆ ಎಸ್ ಎಂ ವಿಟಿಯಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 06586: ಬೆಳಗಾವಿ- ಎಸ್ ಎಂ ಟಿವಿ ವಿಶೇಷ ರೈಲು ನವೆಂಬರ್ 14ರಂದು ಸಂಜೆ 6:50ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ಎಸ್ ಎಂಟಿವಿಗೆ ಆಗಮಿಸಲಿದೆ.
ಈ ರೈಲುಗಳು 16 ಕೋಚ್ ಗಳನ್ನು ಒಳಗೊಂಡಿರಲಿವೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ