Latest

ಅದ್ಧೂರಿ ಮದುವೆಗೆ ಹೋಗಿ ಕೊರೊನಾ ಸೋಂಕು ತಂದ ನೂರು ಜನರು

ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 100 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿರುವ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.

ಮದುವೆಯಲ್ಲಿ ಭಾಗವಹಿಸಿದವರಿಗೆ ಮಾತ್ರವಲ್ಲ ವಧು-ವರರಿಗೂ ಸೋಂಕು ದೃಢಪಟ್ಟಿದೆ. ವಧು ಹಿರಿಯ ಸೇನಾಧಿಕಾರಿಯ ಪುತ್ರಿಯಾಗಿದ್ದರೆ, ವರ ಮರ್ಚೆಂಟ್ ಹಡಗಿನಲ್ಲಿ ಹಿರಿಯ ಅಧಿಕಾರಿ.

ಈ ಮದುವೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸೋದರ ಮಾವಂದಿರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಮದುವೆಯಲ್ಲಿ ಭಾಗವಹಿಸಿದ್ದ ವಧು-ವರ ಸೇರಿ ನೂರು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button