Latest

ಸಾಕುನಾಯಿ ಹುಡುಕಿಕೊಟ್ಟರೆ ಭರ್ಜರಿ ಬಹುಮಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೀತಿಯಿಂದ ಸಾಕಿದ ನಾಯಿ ವಾರದಿಂದ ಕಳೆದು ಹೋಗಿದ್ದಕ್ಕೆ ಗಾಬರಿಗೊಂಡಿರುವ ಮನೆಯವರು, ನಾಯಿ ಹುಡುಕಿಕೊಟ್ಟವರಿಗೆ 10,000 ಬಹುಮಾನ ನೀಡಲು ಮುಂದಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹರ್ಷ ವಿದ್ಯಾಸಂಸ್ಥೆ ಮಾಲೀಕ ಶಿವಕುಮಾರ್ ಅವರ ಮುದ್ದಿನ ಶ್ವಾನ ಗುಂಡ ಕಾಣೆಯಾಗಿದ್ದು, ಉಳಿದ ಶ್ವಾನಗಳು ಊಟ ನೀರು ಬಿಟ್ಟು ಮಂಕಾಗಿದ್ದಾರೆ. ಹೀಗಾಗಿ ಮನೆಯವರೆಲ್ಲ ಪ್ರೀತಿಯ ಗುಂಡನಿಗಾಗಿ ಹುಡುಕಾಡುತ್ತಿದ್ದಾರಂತೆ. ಆದರೆ ಎಲ್ಲಿಯೂ ನಾಯಿ ಪತ್ತೆಯಾಗಿಲ್ಲ.

Home add -Advt

ಹೀಗಾಗಿ ನಾಪತ್ತೆಯಾಗಿರುವ ಶ್ವಾನವನ್ನು ಹುಡುಕಿಕೊಟ್ಟರೆ 10,000 ರೂ ಇನಾಮು ನೀಡುವುದಾಗಿ ಶ್ವಾನದ ಮಾಲೀಕರು ಹೇಳಿದ್ದಾರೆ.

Related Articles

Back to top button