Latest

ಮಾಸ್ಕ್ ಖರೀದಿಸಿ 15 ಲಕ್ಷ ಹಣ ನೀಡದೇ ವಂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಮಾಸ್ಕ್ ಖರೀದಿಸಿ 15 ಲಕ್ಷ ರೂಪಾಯಿ ಹಣ ನೀಡದೇ ಉದ್ಯಮಿಗೆ ವಂಚಿಸಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯುಟ್ಯೂಬ್ ಚಾನಲ್ ನಡೆಸಿತ್ತಿರುವುದಾಗಿ ಹೇಳಿದ್ದ ವೀರೇಶ್ ಹಾಗೂ ಮಧುಗೌಡ ಎಂಬುವವರು ಚಿಕ್ಕಬಾಣಾವರದಲ್ಲಿ ಮಾಸ್ಕ್ ಪೂರೈಕೆ ಮಾಡುವ ಉದ್ಯಮಿ ಸುರೇಂದ್ರ ಸಿಂಗ್ ಅವರಿಂದ ಮಾಸ್ಕ್ ಖರೀದಿಸಿ 15 ಲಕ್ಷ ರೂ ಹಣ ಪಾವತಿಸಿದೇ ವಂಚಿಸಿದ್ದಾರೆ. ಆನ್ ಲೈನ್ ಪೇಮೆಂಟ್ ಗೆ ಸರ್ವರ್ ಪ್ರಾಬ್ಲಮ್ ಎಂದು ಹೇಳಿ ಚೆಕ್ ನೀಡಿದ್ದಾರೆ.

Home add -Advt

ಆದರೆ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಮಾಸ್ಕ್ ಖರೀದಿಸಿರುವ ವೀರೇಶ್ ಹಾಗೂ ಮಧುಗೌಡಗೆ ಕರೆ ಮಾಡಿ ಹಣ ಪಾವತಿಸಲು ಹೇಳಿದರೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಸುರೇಂದ್ರ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Related Articles

Back to top button