CrimeKannada NewsKarnataka NewsLatest

*ಕ್ಷುಲಕ ಕಾರಣಕ್ಕೆ ಗುಂಡಿಕ್ಕಿ ಯುವಕನ ಹತ್ಯೆ*: *ಸೇಡು ತೀರಿಸಿಕೊಳ್ಳಲು ಹಂತಕನನ್ನೇ ಕೊಂದ ಸಹೋದರ*

ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಜಗಳವೊಂದು ಎರಡು ಜೀವಗಳನ್ನು ಬಲಿ ಪಡೆದಿದೆ. ಮೊದಲಿಗೆ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಕೊಲೆಯಿಂದ ಆಕ್ರೋಶಗೊಂಡ ಮೃತನ ಸಹೋದರ ಅಣ್ಣನನ್ನು ಕೊಂದವನನ್ನೇ ಬೆನ್ನಟ್ಟಿ ಹತ್ಯೆ ಮಾಡಿದ್ದಾನೆ. ಕೆಲವೇ ಸಮಯದ ಅಂತರದಲ್ಲಿ ಎರಡು ಕೊಲೆಗಳು ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ.

ದೆಹಲಿಯ ಬವಾನಾ ಪ್ರದೇಶದ ಪೂಠ್ ಖುರ್ದ್ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 27 ವರ್ಷದ ಸಚಿನ್ ಎಂಬಾತನನ್ನು ಕ್ಷುಲ್ಲಕ ಜಗಳದ ಬಳಿಕ ಸೋನು ಅಲಿಯಾಸ್ ಪ್ರದೀಪ್ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸಹೋದರ ಸಚಿನ್‌ನ ಹತ್ಯೆಯಿಂದ ಆಕ್ರೋಶಗೊಂಡ ನರೇಶ್, ಸೋನುವನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿನ್ ಹತ್ಯೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಸೋನುವಿನ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಮೂರು ಖಾಲಿ ಗುಂಡುಗಳು ಪತ್ತೆಯಾಗಿವೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮತ್ತು ಸ್ಥಳೀಯರ ವಿಚಾರಣೆಯ ಮೂಲಕ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಎರಡನೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಸಹೋದರ ನರೇಶ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಎರಡು ಕೊಲೆಗಳ ಹಿಂದಿನ ನಿಖರ ಕಾರಣ ಹಾಗೂ ಘಟನೆಗಳ ಸಂಪೂರ್ಣ ಹಿನ್ನೆಲೆಯನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button