*ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ ಆಯ್ಕೆ*

ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿಶೇಷ ಯೋಜನೆ
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ತರ ಕನ್ನಡ ಜಿಲ್ಲೆಯಾ ಸಿದ್ದಾಪುರ ತಾಲೂಕಿನ ದಂಪತಿಗೆ ಅವಕಾಶ ಸಿಕ್ಕಿದೆ.
ಸಿದ್ದಾಪುರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮನೆ ಸಂಜೀವಿನಿ ಒಕ್ಕೂಟದ ಹಸವಂತೆ ಗ್ರಾಮದ ಪ್ರಗತಿ ಸ್ತ್ರೀ ಶಕ್ತಿ ಸಂಘದ ಸರಸ್ವತಿ ಈಶ್ವರ ನಾಯ್ಕ ದಂಪತಿಗಳು ಆಯ್ಕೆಯಾಗಿದ್ದಾರೆ. ಈ ಸಂಬಂಧ ದಂಪತಿಗೆ ಅಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನ ನೀಡಿದ್ದಾರೆ.
ಸಂಜೀವಿನಿ ಯೋಜನೆಯಡಿಯಲ್ಲಿ ನಡೆಯುವ ಸರಸ್ ಮೇಳಗಳಲ್ಲಿ ಭಾಗವಹಿಸಿದ್ದ ಈ ದಂಪತಿ ತಮ್ಮ ಚಿತ್ತಾರ ಕಲೆಯನ್ನು ಪರಿಚಯ ಮಾಡಿಸಿರುವುದಕ್ಕೆ ಈ ಅವಕಾಶ ದೊರಕಿದೆ ಎಂದು ರಾಷ್ಟ್ರೀಯ ಜೀವನೋಪಾಯ ಇಲಾಖೆಯ ಅಭಿಯಾನ ನಿರ್ದೇಶಕರಾದ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಸರಸ್ವತಿ ಅವರ ಪತಿ ಹಸೆ ಚಿತ್ತಾರ ಕಲಾವಿರ ಈಶ್ವರ ನಾಯ್ಕ ಹಸುವಂತೆ ಅವರಿಗೆ ಪ್ರಸಕ್ತ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು.
ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಸ್ವಸಹಾಯ ಸಂಘದ ಸದಸ್ಯರಾದ ಉತ್ತರ ಕನ್ನಡ ಜಿಲ್ಲೆಯ ಚಿತ್ತಾರ ಕಲೆಯ ಕುಶಲಕರ್ಮಿಗಳನ್ನು ಪ್ರತಿನಿಧಿಸುವ ಸರಸ್ವತಿ ಅವರನ್ನು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹೆಮ್ಮೆಯ ವಿಷಯವಾಗಿದೆ ಎಂದು
ಶ್ರೀವಿದ್ಯಾ ತಿಳಿಸಿದ್ದಾರೆ.
ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಿ, ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Siddapura Couple to Participate in Independence Day Celebrations in Delhi
Special Initiative by the Department of Skill Development and Livelihood Mission
Bengaluru, Aug 9: A couple from Siddapura Taluk in Uttara Kannada district has been given the opportunity to participate in the 78th Independence Day programme taking place in the national capital, New Delhi.
The couple, Saraswati and Eshwar Naik of Pragati Stree Shakti Sangha in Hasuvante village, under the Manamane Sanjeevini Federation of the village panchayat of Siddapura taluk, have been selected for Independence Day celebration in New Delhi after they were financially supported by the National Livelihood Mission under Skill Development department.
Few days back, officials presented the couple with an invitation letter for the event. According to P.I. Srividya, the mission director of the National Livelihood Mission, the couple is being given this opportunity due to their participation in Saras Mela events under the Sanjeevini programme where they showcased their Chittara art.
Saraswati’s husband, Eshwar Naik, a Chittara artist from Hasuvante, was also given the chance to participate in the recent Republic Day celebrations. “It is a matter of pride that Saraswati, representing self-help group members and skilled Chittara artists from Uttara Kannada district, will be participating in the Independence Day programme in Delhi,” Sreevidya said.
As part of this prestigious event, senior officials have informed that the couple will also have an opportunity to meet the President of India, Draupadi Murmu.