
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಮೇಯರ್ ಚುನಾವಣೆಯಲ್ಲಿ ಎಎಪಿ ಮತ್ತೆ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಇಲ್ಲಿ ಭಾರತೀಯ ಜನತಾ ಪಾರ್ಟಿಯ ಕಸರತ್ತು ಮತ್ತೆ ನಪಾಸ್ ಆಗಿದೆ. ಒಟ್ಟು 266 ಮತಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ 150 ಮತ ಗಳಿಸಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ ರೇಖಾ ಗುಪ್ತಾ ಕೇವಲ 116 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಬೆಳಗ್ಗೆ 11.20ಕ್ಕೆ ಆರಂಭಕ್ಕೆ ಚುನಾವಣೆ ನಡೆದಿತ್ತು. 9 ಕಾಂಗ್ರೆಸ್ ಕೌನ್ಸಿಲರ್‌ಗಳು ಚುನಾವಣೆ ಬಹಿಷ್ಕರಿಸಿದ್ದರು. ಇಲ್ಲಿ ಮೋದಿ – ಶಾ ಮೋಡಿ ಮಾಡಲು ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ನಂತರ ಪಂಜಾಬಿನಲ್ಲಿ ಅರವಿಂದ ಕೇಜ್ರಿವಾಲ್ ಅವರ ಛಾಪು ಹೆಚ್ಚಾಗಿದೆ.
*ವಿದಾಯದ ಭಾಷಣ…ವಿಧಾನಸಭೆಯಲ್ಲಿ ಭಾವುಕರಾದ ಮಾಜಿ ಸಿಎಂ ಯಡಿಯೂರಪ್ಪ*
https://pragati.taskdun.com/b-s-yedyurappavidhanasabhe-last-speech/