Latest

ದೆಹಲಿ: ಶತಕ ದಾಟಿತು ಗಾಯಗೊಂಡ ಪೊಲೀಸರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೃಷಿ ಕಾಯ್ದೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳ ಹೆಸರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಗಾಯಗೊಂಡ ಪೊಲೀಸರ ಸಂಖ್ಯೆ 109ಕ್ಕೇರಿದೆ.

ನೂಕಾಟ, ಕಲ್ಲು ತೂರಾಟ, ಟ್ರ್ಯಾಕ್ಟರ್ ಹತ್ತಿಸುವ ಯತ್ನ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

ಆಯುಧಗಳೊಂದಿಗೆ ಬಂದ ಪ್ರತಿಭಟನೆಕಾರರು ಪೊಲೀಸರ ಮೇಲೆ ಟ್ರ್ಯಾಕ್ಟರ್ ನುಗ್ಗಿಸಿ ಕೊಲೆಗೂ ಯತ್ನಿಸಿದ್ದಾರೆ. ಅವರ ಗೂಂಡಾಗಿರಿ ನೋಡಿದರೆ ಇವರೆಲ್ಲರೂ ರೈತರಲ್ಲ, ರೈತರ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಪ್ರತಿಭಟನೆ ನಡೆಸಿದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಕೆಂಪುಕೋಟೆಗೆ ನುಗ್ಗಿ ಧ್ವಜಾರೋಹಣ ಮಾಡಿದ ಪ್ರತಿಭಟನೆಕಾರರು (Updated)

ರೈತರ ಹೆಸರಲ್ಲಿ ಗೂಂಡಾಗಿರಿ; ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button