ಪ್ರಗತಿ ವಾಹಿನಿ ಸುದ್ದಿ, ಚಿಕ್ಕೋಡಿ:
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದವರೆಗೆ ಪಾದಯಾತ್ರೆಗೆ ಶುಕ್ರವಾರ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಚಾಲನೆಯನ್ನು ನೀಡಲಾಯಿತು
ಯಡೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಗೊಂಡಿತು.
ಇದಕ್ಕೂ ಮೊದಲು ಕಾಡಸಿದ್ದೇಶ್ವರ ಕಲ್ಯಾಣ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಶಾಸಕ ಕಲ್ಲಪ್ಪಣಾ ಮಗೆನ್ನವರ ಜಾತಿ, ಧರ್ಮ, ಭೇದ, ಭಾವವಿಲ್ಲದೆ ರಾಜಕೀಯ ಬೆರೆಸದೆ ಚಿಕ್ಕೋಡಿ ಜಿಲ್ಲೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷ ಎಸ್.ವೈ ಹಂಜಿ ಮಾತನಾಡಿ ಚಿಕ್ಕೋಡಿ ಜಿಲ್ಲಾ ಹೋರಾಟದ ಕಿಚ್ಚು ಪ್ರಾರಂಭವಾಗಿದೆ. ಜಿಲ್ಲಾ ಹೋರಾಟವನ್ನು ಜೀವಂತ ಇಡುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಈ ಸಂದರ್ಭದಲ್ಲಿ ವಕೀಲರಾದ ನಾಗೇಶ ಕೀವಡ, ಪುರಸಭೆ ಸದಸ್ಯ ರಾಮಾ ಮಾನೆ, ಗ್ರಾ.ಪಂ ಉಪಾಧ್ಯಕ್ಷ ರಾಹುಲ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ, ತುಕಾರಾಮ ಕೋಳಿ, ಸುರೇಶ ಬ್ಯಾಕೂಡೆ, ಉದ್ಯಮಿ ರವಿ ಹಂಪನ್ನವರ, ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ದುಂಡಪ್ಪ ಬೆಂಡವಾಡೆ, ಖ್ಯಾತ ವೈದ್ಯ ಡಾ. ಎನ್. ಎ. ಮಗದುಮ್, ಸಮಾಜ ಸೇವಕ ಪ್ರದೀಪ ಮಾಳಗೆ, ಅನೀತಾ ವಿಕ್ರಮ ಬನಗೆ, ತ್ಯಾಗರಾಜ ಕದಮ, ಅಪ್ಪಾಸಾಹೇಬ ಚೌಗಲಾ, ಬಸವರಾಜ ಢಾಕೆ, ದಾದು ಕಾಗವಾಡೆ, ಶಿವಾನಂದ ಕರೋಶಿ, ಜಯಪಾಲ ಬೋರಗಾಂವೆ, ಸಂಜಯ ಪಿರಾಜೆ, ಕರವೇ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಎಂ.ಜಿ.ಹಿರೇಮಠ
https://pragati.taskdun.com/mg-hiremath-as-belgaum-regional-commissioner/
https://pragati.taskdun.com/urfi-javed-person-who-threatenedrape-and-killarrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ