Kannada NewsKarnataka News

ಅನಧಿಕೃತ ಪ್ರಾರ್ಥನಾ ಮಂದಿರ ನೆಲಸಮ ಮಾಡಿ – ಬಜರಂಗದಳ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯ ಸಾರಥಿ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಪ್ರಾರ್ಥನಾ ಮಂದಿರವನ್ನು  ನೆಲಸಮ ಮಾಡುವ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಜರಗದಳದ ಪ್ರಮುಖರು, ಮನೆ ಇರುವ ಜಾಗವನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬಜರಂಗದಳದ ಜಿಲ್ಲಾ ಸಂಯೋಜಕ ಬಾವಕಣ್ಣ ಲೋಹಾರ, ಇದು ಕಾನೂನು ಬಾಹಿರ ಕಟ್ಟಡವಾಗಿದ್ದು, ಕೇವಲ 10 ಮುಸಲ್ಮಾನ ಮನೆ ಇರುವ ಈ ಜಾಗದಲ್ಲಿ,ಮಸೀದಿ, ನಮಾಜ  ಹೆಸರು ಹೇಳುತ್ತ ಗೊಂದಲ ನಿರ್ಮಾಣ ಮಾಡಿ ಸುತ್ತ ಮುತ್ತಲಿನ ಹಿಂದು ಕುಟುಂಬದ ಜನರಿಗೆ ತೊಂದರೆ ಮಾಡುವದೇ ಉದ್ದೇಶವಾಗಿದೆ. ಹಾಗಾಗಿ ತಕ್ಷಣ  ಕಾನೂನು ಬಾಹಿರವಾದ ಕಟ್ಟಡ ನೆಲಸಮ ಮಾಡಬೇಕು. ಮಹಾನಗರ ಪಾಲಿಕೆ ಆಯುಕ್ತರು ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ  ಮಾಡಿದ ರೀತಿಯಲ್ಲಿ ಬುಲ್ಡೋಜರ್ ಹಚ್ಚಿ ನೆಲಸಮ ಮಾಡಬೇಕು, ಹಿಂದು ಸಮಾಜದ ಅಕ್ರೋಶ ಹೆಚ್ಚಾಗಲು ಅವಕಾಶ ಮಾಡಿ ಕೊಡಬೇಡಿ ಎಂದು ಅವರು ಎಚ್ಚರಿಸಿದರು.

ವಿಶ್ವ ಹಿಂದುಪರಿಷತ್, ಬಜರಂಗದಳ ಹಿಂದು ಸಮಾಜದಲ್ಲಿ  ಜನಜಾಗೃತಿ ಮಾಡಿ ಈ ಅನ್ಯಾಯದ ವಿರುದ್ಧ , ನ್ಯಾಯ ಸಿಗುವವರೆಗೂ  ಹೋರಾಟ  ಮಾಡಲೇ ಬೇಕಾಗುತ್ತದೆ. ಬೆಳಗಾವಿ ಶಾಂತವಾಗಿರಲು ತಕ್ಷಣ ಯೋಗ್ಯ ಕ್ರಮ ಕೈ ಕೊಳ್ಳಬೇಕು ಎಂದು ಆಗ್ರಹಿಸಿದರು.

ನ್ಯಾಯವಾದಿ ಷಡಕ್ಷರಿ ಹಿರೇಮಠ, ದಾಖಲೆಗಳನ್ನು ಬಿಡುಗಡೆ ಮಾಡಿ, ಇದೊಂದು ಅನಧಿಕೃತ ಕಟ್ಟಡ. ಕಾನೂನು ಬಾಹಿರ ಕಟ್ಟಡ. ಹಾಗಾಗಿ ಇದನ್ನು ಕೆಡವಲು ಆದೇಶ ಮಾಡಲು ಪಾಲಿಕೆ ಆಯುಕ್ತರಿಗೆ ಏನೂ ಅಡಚಣೆ ಇಲ್ಲ. ಹಾಗಾಗಿ ತಕ್ಷಣ ಕಟ್ಟಡ ಕೆಡವಲು  ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಸಾರಥಿನಗರ ನಿವಾಸಿ , ಚಾರ್ಟಡ್ ಏಕೌಂಟಂಟ್ ಹೇಮಾ ಗಿರೆಣ್ಣನವರ್,  ಸುತ್ತಮುತ್ತಲಿನ ಹಿಂದು  ಜನರಿಗೆ ಆಗುವ ತೊಂದರೆ ಗಮನದಲ್ಲಿಟ್ಟು ಅನದಿಕೃತ, ಕಾನೂನು ಬಾಹಿರ ಕಟ್ಟಡ ನೆಲಸಮ ಮಾಡಬೇಕು. ಸಾರಥಿನಗರದ ಜನರು ಶಾಂತಿಯುತವಾಗಿ  ಸಾಮರಸ್ಯದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಭಿನ್ನವಿಸಿದರು.

ವಿಶ್ವ ಹಿಂದುಪರಿಷತ್ ಜಿಲ್ಲಾ  ಕಾರ್ಯದರ್ಶಿ  ಆನಂದ ಕರಿಲಿಂಗನ್ನವರ, ಜಿಲ್ಲಾ ಸಹಕಾರ್ಯದರ್ಶಿ ಗಣೇಶ ಚೌಗಲೆ, ನಗರ ವಿಶ್ವ ಹಿಂದುಪರಿಷತ್ ಕಾರ್ಯ ದರ್ಶಿ ಹೇಮಂತ್ ಹವಳ, ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಮ್ ,  ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್, ಮಠ ಮಂದಿರ ಸಂಪರ್ಕ ಪ್ರಮುಖ ಸತೀಶ ಮಾಲೋದೆ, ವಿಜಯ ಜಾಧವ , ಸುನೀಲ ಗೌರಣ್ಣ , ಸಾರಥಿ ನಗರದ ನಾಗರಿಕರು ಇದ್ದರು.

*ಉದಾತ್ತ ಚಿಂತನೆಯ ಫಲವಾಗಿ ತ್ರಿವಿಧ ದಾಸೋಹ; ಮುಗ್ಧತೆ ಹಾಗೂ ಆತ್ಮಸಾಕ್ಷಿಯಂತೆ ಆತ್ಮಬಲ ಸಾಧಿಸಿದವರು ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ*

https://pragati.taskdun.com/cm-basavaraj-bommaisiddaganga-shreedr-shivakumara-swamijipunyasmarane/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button