Latest

*ರಚಿತಾ ರಾಮ್ ಗಡಿಪಾರಿಗೆ ಆಗ್ರಹ; ಕಾರಣವೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆಲೆಬ್ರಿಟಿಗಳು ಆಡುವ ಮಾತು ಕ್ಷಣಾರ್ಧದಲ್ಲಿ ಸುದ್ದಿಯಾಗಿ ಕೆಲವೊಮ್ಮೆ ಭಾರಿ ವಿವಾದಕ್ಕೂ ಕಾರಣವಾಗುತ್ತದೆ. ಇದೀಗ ಕನ್ನಡ ಚಿತ್ರರಂಗದ ನಟಿ ರಚಿತಾ ರಾಮ್ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಅದೇ ಕಾರಣಕ್ಕೆ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಗಳು ಕೇಳಿಬಂದಿವೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಚಿತಾ ರಾಮ್ ಗಣರಾಜ್ಯೋತ್ಸವವನ್ನು ಮರೆಯಿರಿ ಕ್ರಾಂತಿಯೋತ್ಸವ ಮಾಡಿ ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ ರಚಿತಾ ರಾಮ್ ವಿರುದ್ಧ ದೂರು ನೀಡಿದ್ದರು.

Home add -Advt

ರಚಿತಾರಾಮ್ ಅವರ ಈ ಹೇಳಿಕೆ ಸಂವಿಧಾನವಿರೋಧಿ ಹೇಳಿಕೆಯಾಗಿದೆ. ಸಂವಿಧಾನ ಜಾರಿಯಾದ ದಿನಕ್ಕೆ ಮಾಡಿದ ಅಪಮಾನ, ದೇಶದ್ರೋಹಿ ಹೇಳಿಕೆ. ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿ ಅವರನ್ನು ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಮದ್ದೂರು ಠಾಣೆಯಲ್ಲಿ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

*ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಗಂಡು ಮಕ್ಕಳಿಗೆ ಕಲಿಸಿದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಸಾಧ್ಯ; ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ*

https://pragati.taskdun.com/chief-justice-prasanna-b-varalefoundation-stone-laying-ceremony-for-court-buildingsbelagavi/

Related Articles

Back to top button