Belagavi NewsBelgaum NewsKannada NewsKarnataka NewsLatestPolitics

*ಕ್ಯಾಂಟೀನ್ ಗೆ ಬಂದು ತಮ್ಮ ಕಾಫಿಯನ್ನು ತಾವೇ ತಯಾರಿಸಿ ಸವಿದ ಸಚಿವ ಕೃಷ್ಣಬೈರೇಗೌಡ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಧಿವೇಶನದ ಮಧ್ಯೆಯೇ ಕಂದಾಯ ಸಚಿವ ಕೃಷ್ಣಬೈರೇಗೌಡ ಪೇಯ್ಡ್ ಕ್ಯಾಂಟೀನ್ ಗೆ ಬಂದು ತಮ್ಮ ಕಾಫಿಯನ್ನು ತಾವೇ ಸಿದ್ಧಪಡಿಸಿ ಸವಿದ ವಿಶೇಷ ಪ್ರಸಂಗ ನಡೆದಿದೆ.

ಇಂದಿನಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು, ವಿಪಕ್ಷ ನಾಯಕರು ಕುಂದಾನಗರಿ ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ. ಅಧಿವೇಶನದ ವೇಳೆ ಸದನದಿಂದ ಎದ್ದುಬಂದ ಸಚಿವ ಕೃಷ್ಣಬೈರೇಗೌಡ ಸುವರ್ಣಸೌಧದ ಪೇಯ್ಡ್ ಕ್ಯಾಂಟೀನ್ ಒಳಗೆ ಹೋಗಿ ತಮ್ಮ ಕಾಫಿಯನ್ನು ತಾವೇ ತಯಾರಿಸಿಕೊಂಡರು.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ನನ್ನ ಕಾಫಿಯನ್ನು ಬೇರೆಯವರು ಮಾಡಿದರೆ ಈ ರುಚಿ ಬರಲ್ಲ. ನನ್ನ ಕಾಫಿಯನ್ನು ನಾನೇ ಮಾಡಿಕೊಂಡರೆ ಈ ಟೇಸ್ಟ್… ಹಾಗಾಗಿ ನನ್ನ ಕಾಫಿಯನ್ನು ನಾನೇ ತಯಾರಿಸಿಕೊಳ್ಳುತ್ತೇನೆ ಎನ್ನುತ್ತಾ ಬಿಸಿ ಬಿಸಿ ಕಾಫಿ ಸವಿದರು.

Home add -Advt

Related Articles

Back to top button