ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡೆಂಗ್ಯೂ ಜ್ವರ ಸಾಂಕ್ರಾಮಿಕ ರೋಗವಾಗಿದ್ದು ಇದಕ್ಕೆ ಕಾರಣವಾಗುವ ಸೊಳ್ಳೆಗಳ ಸಂತತಿ ನಿಂಯತ್ರಿಸಬೇಕಾದರೆ ಸ್ವಚ್ಛತೆ ಕಾಪಾಡಬೇಕು ಎಂದು ಖಾನಾಪುರ ನ್ಯಾಯಾಲಯದ ನ್ಯಾಯಾಧೀಶರಾದ ವಿರೇಶ ಹಿರೇಮಠ ಹೇಳಿದರು.
ಖಾನಾಪುರ ನ್ಯಾಯಾಲಯದ ಆವರಣದಲ್ಲಿ ಇಂದು ಗುರುದೇವ ಫೌಂಡೇಶನ್ ಮತ್ತು ನಿಯತ್ತಿ ಫೌಂಡೇಶನ್ ವತಿಯಿಂದ ಡೆಂಗ್ಯೂ ಪ್ರತಿ ರೋಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಸ್ನಾಯು ಮತ್ತು ಕೀಲು ನೋವು, ವಾಕರಿಕೆ ಮತ್ತು ವಾಂತಿಯು ಡೆಂಗ್ಯೂನ ಲಕ್ಷಣಗಳಾಗಿವೆ ಎಂದರು.
ಡೆಂಗ್ಯೂ ಬರದಂತೆ ಮುಂಜಾಗ್ರತವಾಗಿ ಎರಡು ಹನಿ ಲಸಿಕೆಯನ್ನು ಇವರ ಹಸ್ತದಿಂದ ಔಷದಿಯನ್ನು ವಕೀಲರಿಗೆ, ಪಕ್ಷಗಾರರಿಗೆ, ಸಿಬ್ಬಂದಿ ಯವರಿಗೆ, ರೈತ ಮುಖಂಡರಿಗೆ ಲಸಿಕೆ ಹಾಕಲಾಯಿತು.
ಆರ್ ಎನ್ ಪಾಟೀಲ್, ಕೆ ಜಿ ಕಲ್ಲೇಖರ್, ಮ ವೈ ಕದಂ, ಎಸ್ ಕೆ ನಂದಗಡಿ, ಡೆಂಗ್ಯೂ ನಿಯಂತ್ರಣ ಬಗ್ಗೆ ಮಾತನಾಡಿದರು, ಬಸವರಾಜ ಹಪ್ಪಲಿ, ಮಂಜು ಕಾಸರ, ದೀಲಿಪ ಪಾಟೀಲ, ಸುತೋಷ ಕುಂಬಾರ, ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ, ರೈತ ಮುಖಂಡರಾದ, ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಸಂಜೀವ ಅಂಬಡಗಟ್ಟಿ, ಶಂಕರ ಪದ್ಮಪ್ಪನವರ, ಈರಣ್ಣ ಮಾಟೊಳ್ಳಿ, ಇತರರು ಉಪಸ್ಥಿತರಿದ್ದರು. ವಕೀಲರಾದ ಅನಿಲ ಡಿ ಲೋಕರೆ, ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ