ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲೆಯಿಂದ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಹಾನಿ ಉಂಟಾಗುತ್ತದೆ. ಅದೇ ರೀತಿ ಈ ವರ್ಷವು ಬಳ್ಳಾರಿ ನಾಲೆಯ ನೀರಿನಿಂದ ರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಶಾಸಕ ಅನಿಲ ಬೆನಕೆ ಅವರು ಡ್ರೋಣ್ ಮೂಲಕ ಸರ್ವೆ ನಡೆಸಿದರು.
ಕೆಲ ದಿನಗಳ ಹಿಂದೆ ಶಾಸಕ ಅನಿಲ ಬೆನಕೆ ಅವರು, ಅಧಿಕಾರಿಗಳ ಜೊತೆ ಬಳ್ಳಾರಿ ನಾಲೆಯನ್ನು ಪರಿಶೀಲನೆ ನಡೆಸಿದರು, ಇಂದು ಮತ್ತೆ ಅವರು ಅಧಿಕಾರಗಳು, ರೈತರ ಜೊತೆಗೂಡಿ ಡ್ರೋನ್ ಮೂಲಕ ಸರ್ವೆ ನಡೆಸಿದರು.
ಸರ್ವೆ ನಡೆಸಿದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿರುವ ಅವರು, ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಬಳ್ಳಾರಿ ನಾಲೆಯಿಂದಾಗಿ ರೈತರಿಗೆ ಸಾಕಷ್ಟು ಹಾನಿ ಉಂಟಾಗಿದೆ. ಆದ್ದರಿಂದ ವಸ್ತುಸ್ಥಿತಿ ಅರಿಯಲು ನಾಲ್ಕು ದಿನದ ಹಿಂದೆ ಅಧಿಕಾರಿಗಳ ಜೊತೆ ಹೆಚ್ಚು ಹಾನಿ ಉಂಟಾಗಿರುವ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ರೈತರ ಬೆಳೆ ಹಾನಿ ಆಗಿರುವುದರಿಂದ ಇಂದು ಡ್ರೋಣ್ ಮುಖಾಂತರ ಸರ್ವೆ ನಡೆಸಿ, ಉತ್ತರ ಮತಕ್ಷೇತ್ರದಲ್ಲಿ ರೈತರಿಗೆ ಹಾನಿ ಆಗಿರುವ ಕುರಿತು ವಸ್ತುಸ್ಥಿತಿ ತಿಳಿಯಲಿದ್ದೇವೆ ಎಂದು ತಿಳಿಸಿದರು.
ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಆದರೆ ರೈತರು ಪರಿಹಾರದ ಸಲುವಾಗಿ ಸಮರ್ಪಕವಾದ ದಾಖಲೆಗಳನ್ನು ರೆಡಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಮೇಶ್ ಜಾರಕಿಹೊಳಿ & ಫ್ರೆಂಡ್ಸ್ ಕಾಂಗ್ರೆಸ್ ಗೆ ಮರು ಸೇರ್ಪಡೆ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ