ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ ದೇವೇಗೌಡರದ್ದು ದೊಡ್ಡ ಕುಟುಂಬ. ಅಂತಹ ಕುಟುಂಬದ ಪ್ರಕರಣಗಳ ಬಗ್ಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ಚಿತ್ರ, ವಿಕೃತ ಮತ್ತು ಅಸಹ್ಯ ಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿ, ಮೊದಲು ಪ್ರಜ್ವಲ್ ರೇವಣ್ಣ, ಯಡಿಯೂರಪ್ಪ ಪ್ರಕರಣ, ಈಗ ಸೂರಜ್ ರೇವಣ್ಣ ಪ್ರಕರಣ. ಯಾರು ಮಾಡಿದ್ದಾರೋ ಅವರಿಗೂ ಏನ್ ಅನ್ನಿಸ್ತಿಲ್ಲ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ ಎಂದರು.
ದೊಡ್ಡ ಮನೆ, ದೊಡ್ಡ ಕುಟುಂಬದವರಿಗೆ ನೀವು ಕೇಳಬೇಕು, ನಾವು ಜವಾಬ್ದಾರಿ ಕುಟುಂಬದಿಂದ ಬಂದಿದ್ದೇವೆ. ಈ ಕಳಂಕ ಅಳಿಸೋವರೆಗೂ ಅಧಿಕಾರ ಬಿಟ್ಟಿರ್ತೇವೆ ಅಂತಾ ಹೇಳ್ತಾರಾ ಅವರು ಎಂದು ಪ್ರಶ್ನಿಸಿದ ಸಚಿವ ಖರ್ಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಪ್ರಕರಣದ ಬಗ್ಗೆ ಬಿಜೆಪಿಯವರ ಮೌನ ಯಾಕೆ ಅಂತಾ ಗೊತ್ತಾಗ್ತಿಲ್ಲ. ಬೇರೆ ಸಮಯದಲ್ಲಿ ನ್ಯಾಯದ ಬಗ್ಗೆ ಮಾತಾಡುವ ಬಿಜೆಪಿಯವರು ಇವಾಗ ಏಕೆ ಮೌನ ತಾಳಿದ್ದಾರೆ? ಸಂವಿಧಾನ ಉಲ್ಲಂಘನೆ, ಕಾನೂನು ಉಲ್ಲಂಘನೆ ಆದಾಗ ಬಿಜೆಪಿಯವರು ಮಾತನಾಡುವುದಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ