
ರಾಜ್ಯ ರಾಜಕೀಯ ಅಸ್ಥಿರವಾದರೂ ಇಲ್ಲಿ ಅಭಿವೃದ್ಧಿಗೆ ತಡೆ ಇಲ್ಲ
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಮಗಾರಿ ನಿರಂತರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಎರಡು ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಗ್ರಾಮದ ಹಿರಿಯರು ಚಾಲನೆ ನೀಡಿದರು.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದರೂ ಕಾಂಗ್ರೆಸ್ ಮುಖಂಡರಾದಿ ಚನ್ನರಾಜ ಹಟ್ಟಿಹೊಳಿ ಹಾಗೂ ಮೃಣಾಲ್ ಹೆಬ್ಬಾಳಕರ್ ಮಾರ್ಗದರ್ಶನದಲ್ಲಿ ಕೆಲಸಗಳು ನಡೆಯುತ್ತಿವೆ.
ಹಿರೇಬಾಗೇವಾಡಿ ಗ್ರಾಮದ ಕಾಂಕ್ರೀಟ್ ರಸ್ತೆ ಹಾಗೂ ಗಟಾರಗಳ ನಿರ್ಮಾಣ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರಿನ ಪ್ರಮುಖರು ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಚನ್ನರಾಜ ಹಟ್ಟಿಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ್, ಪ್ರಶಾಂತ ದೇಸಾಯಿ, ಸುರೇಶ ಇಟಗಿ, ಗೌಸಮೊದ್ದಿನ ಜಾಲಿಕೊಪ್ಪ, ಉಳವಪ್ಪ ರೊಟ್ಟಿ, ಮೀರಾ ನದಾಫ್, ಅನೀಲ ಪಾಟೀಲ, ಶಿವು ತೋಟಗಿ, ಪ್ರಕಾಶ ಜಪ್ತಿ, ಶ್ರೀಕಾಂತ್, ಅಡಿವೇಶ ಇಟಗಿ, ಸಿದ್ದನಗೌಡ ಪಾಟೀಲ, ಬಸನಗೌಡ ಪಾಟೀಲ, ಮನೋಹರ ದುರ್ಗಣ್ಣವರ, ನಿಂಗಪ್ಪ ತಳವಾರ, ರುದ್ರಗೌಡ ಪಾಟೀಲ, ಮಹಾಂತೇಶ ಕಂಬಿ, ತೇಜು ಉಪ್ಪಾರ, ರಾಜಣ್ಣ ಪಾಟೀಲ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ