ಪ್ರಗತಿವಾಹಿನಿ ಸುದ್ದಿ; ಧಾರವಾಡ: ಭಾರತವು ಕಲೆ, ಸಂಸ್ಕೃತಿಗಳಲ್ಲಿ ಶ್ರೀಮಂತವಾದ ರಾಷ್ಟ್ರ. ಅಂತಹ ಕಲೆ, ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಮುಂದಿನ ಪಿಳಿಗೆಗೂ ಅವುಗಳನ್ನು ತಲುಪಿಸುವ ಕಾರ್ಯವನ್ನು ಧಾರವಾಡ ರಂಗಾಯಣ ಮಾಡುತ್ತಿದೆ ಎಂದು ಮಂಗಳಮುಖಿ ಸೋಶಿಯಲ್ ವರ್ಕರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷರಾದ ವೈಶಾಲಿ ಬ್ಯಾಳಿ ಅವರು ಹೇಳಿದರು.
ಧಾರವಾಡ ರಂಗಾಯಣವು ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಆದುನಿಕತೆಯಲ್ಲಿ ಇಂದು ಜನರು ನಮ್ಮ ಭಾರತೀಯ ಕಲೆ, ಸಂಸ್ಕೃತಿಗಳನ್ನು ಮರೆತು, ನವಮಾಧ್ಯಮಕ್ಕೆ ಸೀಮಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಂಗಾಯಣವು ನಾಟಕಗಳ ಮೂಲಕ ಜನರಲ್ಲಿ ಸಂಸ್ಕøತಿ, ಕಲೆ, ಪರಂಪರೆಗಳನ್ನು ತಿಳಿಸುತ್ತಿದೆ. ಜೀವನವೇ ಒಂದು ಸಂಸ್ಕøತಿಯಿದ್ದಂತೆ. ಅದು ನಮಗೆ ಎಲ್ಲವನ್ನು ಕಲಿಸುತ್ತದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಬರುವಂತಹ ಎಲ್ಲ ಕಷ್ಟ, ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ನಮ್ಮನ್ನು ನಾವು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಮಂಗಳಮುಖಿಯರಿಗೆ ಉತ್ತಮ ಅವಕಾಶಗಳನ್ನು ನೀಡಲಾಗುತ್ತಿದೆ. ಅಂತಹ ಅವಕಾಶಗಳನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಮೋಹನಗೌಡ ಬಸವನಗೌಡ ಪಾಟೀಲ ಅವರು ಮಾತನಾಡಿ, ರಂಗಾಯಣವು ಕೇವಲ ಧಾರವಾಡಕ್ಕೆ ಮಾತ್ರ ಸೀಮಿತವಾಗಿರದೇ ಏಳು ಜಿಲ್ಲೆಗಳಿಗೂ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗಭೂಮಿಯನ್ನು ವಿಸ್ತರಿಸುತ್ತಿದೆ. ಚಿಣ್ಣರಮೇಳವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ರಂಗಾಯಣ ಮಾಡಿದೆ. ಇದೇ ರೀತಿ ಕಾರ್ಯಗಳ ಮೂಲಕ ರಂಗಾಯಣವನ್ನು ಉನ್ನತ ಮಟ್ಟದಲ್ಲಿ ಬೆಳೆಸಬೇಕು ಎಂದು ಹೇಳಿದರು.
ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ ರಂಗಾಯಣವು ಹಲವಾರು ವಿಭಿನ್ನ ರಂಗಚಟುವಟಿಕೆಗಳನ್ನು ಮಾಡುವ ಮೂಲಕ ಅನೇಕ ವೃತ್ತಿ ಹಾಗೂ ಹವ್ಯಾಸಿ ಕಲಾವಿದರಿಗೆ ಅವಕಾಶಗಳನ್ನು ನೀಡುತ್ತಿದೆ. ಪ್ರತಿ ವಾರಾಂತ್ಯ ನಾಟಕಗಳನ್ನು ಆಯೋಜಿಸುವ ಮೂಲಕ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಸಮಾಜದಲ್ಲಿ ಮಂಗಳಮುಖಿಯರಿಗೆ ಉತ್ತಮ ಸ್ಥಾನಮಾನವನ್ನು ನೀಡಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಎಲ್ಲ ರಂಗಾಸಕ್ತರ ಸಹಕಾರ ರಂಗಾಯಣಕ್ಕೆ ಅಗತ್ಯವಾಗಿದೆ. ಹೀಗೆಯೇ ಪ್ರೋತ್ಸಾಹ ನೀಡುವ ಮೂಲಕ ರಂಗಭೂಮಿ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.
ಫಕ್ಕೀರಪ್ಪ ಮಾಧಮಭಾವಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶೃತಿ ಜಿ. ರಂಗರೂಪ/ನಿರ್ದೇಶಿಸಿ, ನಿಂಗರಾಜ ಆಯಟ್ಟಿ ಸಂಗೀತ ಸಂಯೋಜಿಸಿದ ಮುತ್ತಿನ ರಾಶಿ ನಾಟಕವನ್ನು ಕಲಾ ಸ್ಪರ್ಶ ಸಾಂಸ್ಕೃತಿಕ ಅಕಾಡೆಮಿ ಧಾರವಾಡ ಕಲಾವಿದರು ಪ್ರದರ್ಶಿಸಿದರು.
ಹುರಕಡ್ಲಿ ಅಜ್ಜನವರು ಮನುಕುಲದ ಚಿಂತಕರಾಗಿದ್ದರು – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ