
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಶೋಧಕಾರ್ಯ ಚುರುಕುಗೊಳಿಸಿದೆ. ಇಂದು ನಾಲ್ಕನೇ ದಿನದ ಶೋಧಕಾರ್ಯ ಮುಕ್ತಾಯಗೊಂಡಿದೆ.
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ವಿವಿಧ ಸ್ಥಳಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ದೂರುದಾರ ತೀರಿಸಿರುವ ಜಾಗದಲ್ಲಿ ಉತ್ಖನನ ಮಾಡಿ ಕಳೆಬರಹ ಶೋಧ ನಡೆಸುವ ಕಾರ್ಯವನ್ನು ಎಸ್ ಐಟಿ ಮಾಡುತ್ತಿದೆ. ಇಂದು 9ನೇ ಹಾಗೂ 10 ನೇ ಪಾಯಿಂಟ್ ಗಳಲ್ಲಿ ಶೋಧಕಾರ್ಯ ನಡೆಸಲಾಯಿತು. ಎರಡೂ ಸ್ಥಳಗಳಲ್ಲಿಯೂ ಯಾವುದೇ ಅಸ್ಥಿಪಂಜರಗಳ ಅವಶೇಷ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಶೋಧಕಾರ್ಯದ ವೇಳೆ ಎಸ್ ಐಟಿ ತಂಡ ದೂರುದಾರನನ್ನು ಸ್ಥಳಕ್ಕೆ ಕರೆತಂದು ಸ್ಥಳವನ್ನು ಸಂಪೂರ್ಣ ಮರೆಮಾಚಿ ಶೋಧಕಾರ್ಯ ನಡೆಸುತ್ತಿದೆ. ಇನ್ನು ನಾಳೆ ಭಾನುವಾರ ರಜಾ ದಿನವಾಗಿರುವುದರಿಂದ ಸೋಮವಾರ ಶೋಧಕಾರ್ಯ ಮುಂದುವರೆಯಲಿದೆ. ದೂರುದಾರ ಒಟ್ಟು 13 ಸ್ಥಳಗಳಲ್ಲಿ ಶವ ಹೂತಿಟ್ಟುವರ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.