
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧಕಾರ್ಯದ ವೇಳೆ ಪಾಯಿಂಟ್ 1ರಲ್ಲಿ ಸಿಕ್ಕಿದ್ದ ಪಾನ್ ಕಾರ್ಡ್, ಎಟಿಎಂ ಯಾರದ್ದು ಎಂಬುದು ಗೊತ್ತಾಗಿದೆ.
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವ ಹೂತಿಟ್ಟಿದ್ದಾಗಿ ವ್ಯಕ್ತಿಯೊಬ್ಬ ತಪ್ಪೊಪ್ಪಿಕೊಂಡ ಪ್ರಕರಣದಲ್ಲಿ ವ್ಯಕ್ತಿ ತೋರಿಸಿರುವ 13 ಜಾಗಗಳಲ್ಲಿ ಮಣ್ಣು ಅಗೆದು ಅಸ್ಥಿಪಂಜರ ಹುಡುವ ನಿಟ್ಟಿನಲ್ಲಿ ಶೋಧಕಾರ್ಯವನ್ನು ಎಸ್ ಐಟಿ ನಡೆಸುತ್ತಿದೆ. ಸದ್ಯ 6 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗಿದ್ದು, 6ನೇ ಪಾಯಿಂಟ್ ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ. ಇನ್ನು ಪಾಯಿಂಟ್ 1ರಲ್ಲಿ ನಡೆದ ಶೋಧದ ವೇಳೆ ಪಾನ್ ಕಾರ್ಡ್, ಎಟಿಎಂ ಪತ್ತೆಯಾಗಿತ್ತು. ಇದೀಗ ಅದರ ವಾರಸುದಾರ ಯಾರೆಂಬುದು ಗೊತ್ತಾಗಿದೆ.
ವೀರಸಾಗರ ನಿವಾಸಿ ಸುರೇಶ್ ಎಂಬುವವರ ಪಾನ್ ಕಾರ್ಡ್, ಎಟಿಎಂ ಎಂದು ಗೊತ್ತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ವೀರಸಾಗರ ನಿವಾಸಿ ಸುರೇಶ್ ಎಂಬುವವರದ್ದಾಗಿದ್ದು, ಅವರು ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಅವರ ಪುತ್ರ. ಮಾರ್ಚ್ ತಿಂಗಳಿನಲ್ಲಿ ಜಾಂಡೀಸ್ ನಿಂದ ಸುರೇಶ್ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ವೀರಸಾಗರದ ಸುರೇಶ್ ಮನೆಬಿಟ್ಟು ಹೋಗಿದ್ದ.ರು ಮಾರ್ಚ್ ನಲ್ಲಿ ಜಾಂಡೀಸ್ ನಿಂದ ಸಾವನ್ನಪ್ಪಿದ್ದರು. ಕುಟುಂಬದವರೇ ಸೇರಿ ಅವರ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದರು ಎಂದು ತಿಳಿದುಬಂದಿದೆ.