Karnataka NewsPolitics

*ಚುಡಾಯಿಸಿದರೆ, ಅತ್ಯಾಚಾರಕ್ಕೆ ಯತ್ನಿಸಿದರೆ ಸರಿಯಾದ ಜಾಗಕ್ಕೆ ಒದ್ದು ತ್ರಿಶೂಲದಿಂದ ಚುಚ್ಚಿ: ಪ್ರಮೋದ್ ಮುತಾಲಿಕ್*

ಪ್ರಗತಿವಾಹಿನಿ ಸುದ್ದಿ : ಯಾವನಾದ್ರೂ ಚುಡಾಯಿಸಿದರೆ, ಅತ್ಯಾಚಾರ ಮಾಡಲು ಬಂದ್ರೆ ಒದಿಯೋ ಜಾಗಕ್ಕೆ ಸರಿಯಾಗಿ ಒದೀರಿ ಹಾಗೂ ತ್ರಿಶೂಲದಿಂದ ಚುಚ್ಚಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸುರಕ್ಷತೆಗಾಗಿ ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ತ್ರಿಶೂಲ ಇಟ್ಟುಕೊಂಡಿರಿ. ಯಾರಾದರು ಚುಡಾಯಿಸಿದರೆ ಇಲ್ಲವೇ ರೇಪ್‌ಗೆ ಯತ್ನಿಸಿದರೆ ಕೂಡಲೇ ತ್ರಿಶೂಲದಿಂದ ಚುಚ್ಚಿಬಿಡಿ. ಆ ಜಾಕ್ಕೆ ಒದ್ದು ಬಿಡಿ ಎಂದು ಹೇಳಿದರು.

ದುರ್ಗಾಮಾತೆಯ ಕೈಯಲ್ಲಿ 10 ಶಸ್ತ್ರಗಳಿದ್ದರೆ, ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ನಾವು ಕೊಡುತ್ತಿದ್ದೇವೆ. ಮುಂಬರುವ ಆಯುಧ ಪೂಜೆಗೆ ಹರಿತವಾದ ತಲ್ವಾರ್, ತ್ರಿಶೂಲವಿಟ್ಟು ಪೂಜಿಸಿ ಎಂದರು.

ನೇಹಾ ಹಿರೇಮಠ ಕೊಲೆಗೆ ನ್ಯಾಯ ಸಿಗಬೇಕಾದರೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಹತ್ಯೆಯಾಗಿ ಒಂದು ವರ್ಷವೇ ಕಳೆದಿದೆ. ಕೊಲೆಗಡುಕನಿಗೆ ಕೋರ್ಟ್ ಬೇಲ್ ಕೊಟ್ಟರೆ, ನಾವೇ ಅವನನ್ನು ಕಲ್ಲು ಹೊಡೆದು ಸಾಯಿಸುತ್ತೇವೆ ಎಂದರು. 

ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸಿದ ಹೆಣ್ಮಕ್ಕಳಿಗೆ ಶ್ರೀರಾಮಸೇನೆ ಕಾರ್ಯಕರ್ತರು ತ್ರಿಶೂಲಗಳನ್ನು ವಿತರಣೆ ಮಾಡಿದರು.

Related Articles

Back to top button