*ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು: ಮಹೇಶ್ ತಿಮರೋಡಿ ಮನೆಯಲ್ಲಿ ಮಾಸ್ಕ್ ಮ್ಯಾನ್ ಮೊಬೈಲ್ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ಹೋರಾಟ ಮಹೇಶ್ ತಿಮರೋಡಿ ನಿವಾಸದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ.
ಧರ್ಮಸ್ಥಳದ ಹಲವೆಡೆ ಶವಗಳನ್ನೂ ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಈಗಾಗಲೇ ಎಸ್ ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚಿನ್ನಯ್ಯನಿಗೆ ಮಹೇಶ್ ತಿಮರೋಡಿ ಹಾಗೂ ಹಲವರು ಬೆಂಬಲ ನೀಡಿದ್ದಲ್ಲದೇ ಅವರೇ ಆತನ ಹಿಂದಿರುವ ಷಡ್ಯಂತ್ರದ ಗ್ಯಾಂಗ್ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳು ಮಹೇಶ್ ತಿಮರೋಡಿಯ ಉಜಿರೆ ನಿವಾಸದ ಮೇಲೆ ದಾಳಿ ನಡೆಸಿದೆ.
ಈ ವೇಳೆ ಚಿನ್ನಯ್ಯನ ಮೊಬೈಲ್ ತಿಮರೋಡಿ ಮನೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಚಿನ್ನಯ್ಯ ವಾಸವಾಗಿದ್ದ ತಿಮರೋಡಿ ನಿವಾಸದ ರೂಮ್ ನಲ್ಲಿ ಆತನಿಗೆ ಸೇರಿದ ಹಲವು ವಸ್ತುಗಳು ಪತ್ತೆಯಾಗಿವೆ. ಚಿನ್ನಯ್ಯ, ತಿಮರೋಡಿ ನಿವಾಸದಿಂದಲೇ ಹಲವು ಸಂದರ್ಶನಗಳನ್ನು ನೀಡಿದ್ದ. ಮಹೇಶ್ ತಿಮರೋಡಿ ನಿವಾಸದ ಸಿಸಿಟಿವಿ, ಹಾರ್ಡ್ ಡಿಸ್ಕ್ ಗಳನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.