Kannada NewsKarnataka NewsLatestPolitics

*ಧಾರವಾಡದ ಗೋವಿನಕೊಪ್ಪದಲ್ಲಿ ಅಯೋಧ್ಯಾಪತಿ ಶ್ರೀರಾಮ ಪುತ್ಥಳಿ ಅನಾವರಣ*

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಮುಖರು ಭಾಗಿ

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ಹುಬ್ಬಳ್ಳಿ- ಧಾರವಾಡದೆಲ್ಲೆಡೆ ಮುಗಿಲು ಮುಟ್ಟಿದೆ. ಅವಳಿ ನಗರ ಸಂಪೂರ್ಣ ಕೇಸರಿ ವರ್ಣದಲ್ಲಿ ಶೃಂಗಾರಗೊಂಡಿದೆ. ಪ್ರಮುಖ ವೃತ್ತ, ಮಠ- ಮಂದಿರಗಳಲ್ಲಿ ಪ್ರಭು ಶ್ರೀರಾಮನ ಕಟೌಟ್ ಗಳು, ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಶ್ರೀರಾಮನ ಸ್ವಾಗತಕ್ಕೆ ಅದ್ದೂರಿ ಸಿದ್ಧತೆಯಾಗಿದೆ.

ಧಾರವಾಡದ ಗೋವಿನಕೊಪ್ಪದಲ್ಲಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದಂಥ ಶ್ರೀರಾಮನ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸಿರುವ ರಾಮ ಭಕ್ತರು ವಿಜೃಂಭಣೆಯಿಂದ ರಾಮ ಪ್ರತಿಷ್ಥಾಪನೆ ಐತಿಹಾಸಿಕ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

Home add -Advt

ಸಚಿವ ಪ್ರಹ್ಲಾದ ಜೋಶಿ ಭಾಗಿ:
ಗೋವಿನಕೊಪ್ಪದಲ್ಲಿ ಶ್ರೀರಾಮನ ಪುತ್ಥಳಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅನಾವರಣ ಗೊಳಿಸಿ ರಾಮ ಭಕ್ತರೊಂದಿಗೆ ಜಯಘೋಷ ಹಾಕಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಶಾಸಕ ಅರವಿಂದ್ ಬೆಲ್ಲದ, ಮಾಜಿ ಶಾಸಕ ದೇಸಾಯಿ, ಸೀಮಾ ಮಸೂತಿ ಪ್ರಮುಖರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button