Kannada NewsKarnataka News

ನ.14 ರಂದು ಮಧುಮೇಹ ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ) ತಪಾಸಣಾ ಶಿಬಿರವನ್ನು ನವೆಂಬರ್ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಏರ್ಪಡಿಸಲಾಗಿದೆ.

ಮಧುಮೇಹ ಸಂಬಂಧಿ ರೋಗವನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆಯನ್ನು ತಜ್ಞವೈದ್ಯರು ನೀಡಲಿದ್ದಾರೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ದಯಾನಂದ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಜನಸಂಪರ್ಕ ವಿಭಾಗ ಅಥವಾ ದೂ. 0831-2473777   (ವಿಸ್ತೀರ್ಣ: 1116/1117) ಇಲ್ಲಿಗೆ ಸಂಪರ್ಕಿಸಲು  ಪ್ರಕಟಣೆಯಲ್ಲಿ ಕೋರಲಾಗಿದೆ.

ವಿಚಾರಣಾಧೀನ ಕೈದಿ ಸಾವು ಪ್ರಕರಣ: CBI ತನಿಖೆಗೆ ವಹಿಸುವಂತೆ ಆಪ್ ಆಗ್ರಹ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button