ಮಧ್ಯಂತರ ರಕ್ಷಣೆ ನಿರೀಕ್ಷಿಸಿ ಸಲ್ಲಿಸಿದ್ದ ಡಿಕೆಶಿ ಅರ್ಜಿ ತಿರಸ್ಕಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಜಾರಿ ನಿರ್ದೇಶನಾಲಯ ತುರಿತು ವಿಚಾರಣೆಗೆ ಕರೆದಿರುವುದಕ್ಕೆ ತಡೆ ನೀಡುವಂತೆ ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಡಿ.ಕೆ.ಶಿವಕುಮಾರ ಬಂಧಿಸಿದರೆ ಸಮಸ್ಯೆಯಾಗುತ್ತದೆ, 3 ದಿನ ರಜೆ ಇದೆ. ಹಾಗಾಗಿ ನಮಗೆ ಸ್ವಲ್ಪ ಕಾಲಾವಕಾಶ ಬೇಕಿದೆ. ಒಂದು ವಾರ ಸಮಯ ನೀಡಬೇಕು ಎಂದು ಡಿ.ಕೆ.ಶಿ ಪರ ವಕೀಲರು ಕೋರಿದ್ದರು. ಆದರೆ ಇವರ ವಾದಕ್ಕೆ ಒಪ್ಪದ ಇಡಿ, ಈ ಕುರಿತು ನಿನ್ನೆಯೇ ವಿಚಾರಣೆ ನಡೆದಿದೆ. ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹಾಗಾಗಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿತು.
ಅಂತಿಮವಾಗಿ ನ್ಯಾಯಾಲಯ ವಿಚಾರಣೆಗೆ ತಡೆ ನೀಡಲು ನಿರಾಕರಿಸಿತು. ಹಾಗಾಗಿ ಡಿ.ಕೆ.ಶಿವಕುಮಾರ ಇಂದೇ ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಿದೆ.
ಜೊತೆಗೆ ಜಾರಿ ನಿರ್ದೇಶನಾಲಯ ವಿಚಾರಣೆ ವೇಳೆ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.
ಒಂದೊಮ್ಮೆ ಜಾರಿ ನಿರ್ದೇಶನಾಲಯ ಬಂಧಿಸಿದಲ್ಲಿ ಮುಂದಿನ 3 ದಿನ ರಜೆ ಇರುವುದರಿಂದ ಡಿ.ಕೆ.ಶಿವಕುಮಾರ್ ಗೆ ಜಾಮೀನು ಸಿಗುವುದೂ ಕಷ್ಟವಾಗಬಹುದು.
ಇಂದೇ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ
ಸಿಕ್ಕಿದ್ದೆಲ್ಲ ನನ್ನದೇ ಹಣ, ಅದಕ್ಕೆಲ್ಲ ದಾಖಲೆ ಇದೆ, ಬೇನಾಮಿ ಅಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ