
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇಂದಿನಿಂದ ದುಬಾರಿ ದುನಿಯಾ ಶುರುವಾಗಿದ್ದು, ಹಾಲು, ಮೊಸರು, ವಿದ್ಯುತ್ , ಟೋಲ್ ದರ, ವಾಹನ ಖರೀದಿ ದರ ಏರಿಕೆ ಜೊತೆಗೆ ಕಸಕ್ಕೂ ಟ್ಯಾಕ್ಸ್ ಪಾವತಿಸಬೇಕಾದ ದುಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೇ ಡೀಸೆಲ್ ಸೇಲ್ ಟ್ಯಾಕ್ಸ್ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ. ಡಿಸೆಲ್ ಮೇಲೆ ವಿಧಿಸಲಾಗುತ್ತಿರುವ ಕರ್ನಾಟಕ ಮಾರಾಟ ತೆರಿಗೆ ದರವನ್ನು ಪ್ರತಿ ಲೀಟರ್ ಗೆ 2 ರೂ.ನಂತೆ ಏರಿಕೆ ಮಾಡಲಾಗಿದೆ.
ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಡೀಸೆಲ್ ಮಾರಾಟ ತೆರಿಗೆ ಶೇ. 21.17ಕ್ಕೆ ಏರಿಸಲಾಗಿದೆ. ಇದರಿಂದ ಲೀಟರ್ ಗೆ 2 ರೂಪಾಯಿ ಏರಿಕೆಯಾಗಿದ್ದು, ಮಾರಾಟ ದರ 91.02 ರೂಪಾಯಿ ಆಗುತ್ತದೆ. ಆದಾಗ್ಯೂ ರಾಜ್ಯದಲ್ಲಿನ ಪರಿಷ್ಕೃತ ಮಾರಾಟ ದರ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದು, ನೆರೆ ರಾಜ್ಯದ ಡೀಸೆಲ್ ದರದ ಬಗ್ಗೆಯೂ ಪಟ್ಟಿ ನೀಡಿದೆ.
