*ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಸಹಕಾರ ಬ್ಯಾಂಕ್ ವಿರುದ್ಧ ಠೇವಣಿದಾರರ ವಿಭಿನ್ನ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಸಹಕಾರ ಬ್ಯಾಂಕ್ ಠೇವಣಿದಾರ ಹಣ ವಾಪಸ್ ನೀಡುತಿಲ್ಲ ಎಂದು ಠೇವಣಿದಾರು ಆರೋಪಿಸಿ ಇಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾ ಅಧಿಕಾರಿಗಳ ಕಚೇರಿ ಆವರಣ ಮುಂಭಾಗದಲ್ಲಿ ಸೀರೆ, ಬಳೆ, ಕಿವಿ ಒಲೆ, ಕುಂಕುಮ, ಅರಿಶಿನ ತಂದು ಪ್ರತಿಭಟನಾಕಾರರು ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕ್ ಠೇವಣಿ ಇಟ್ಟ ಹಣ ಹಾಗೂ ಬಡ್ಡಿ ನೀಡದ ಆರೋಪ. ಪ್ರಕರಣ ದಾಖಲಾಗಿ 11 ತಿಂಗಳು ಕಳೆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮಕ್ಕೆ ಮಾಹಿತಿ ಕೇಳಿದ್ದರು. ಉತ್ತರ ಸಿಗದೆ ಕಂಗಾಲಾಗಿರುವ ಠೇವಣಿದಾರರು ನಿಗಮದ ಅಧಿಕಾರಿಗಳು ಕೈಗೆ ಬಳೆ ತೊಟ್ಟುಕೊಳ್ಳಿ ಎಂದರು.
ಬ್ಯಾಂಕ್ ಸ್ಥಾಪಕ ವಿ.ಎಸ್. ಸಾಧುನವರ ಒಬ್ಬ ಒಳ್ಳೆ ವ್ಯಕ್ತಿ ಅಂದುಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೊಸೈಟಿಯಲ್ಲಿ ಹಣ ಇಟ್ಟಿದ್ವಿ ಆದರೆ ಸಾವಿರಾರು ಜನ ಇಟ್ಟಿದ್ದ ಠೇವಣಿ ಹಣ ವಾಪಸ್ ನೀಡುತ್ತಿಲ್ಲ. ಹಣ ವಾಪಸ್ ನೀಡದಿದ್ದರೆ ನಾವು ಬೀದಿಗೆ ಬರುತ್ತೇವೆ. ನಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಆಗ್ರಹಿಸಿದರು.