Kannada NewsLatest

ಗುಂಡು ಹಾರಿಸಿಕೊಂಡು ಡಿಐಜಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ತಮಿಳುನಾಡಿನ ಕೋಯಮತ್ತೂರಿನಲ್ಲಿ ಡಿಐಜಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿ. ವಿಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ.  ಕೊಯಂಬತ್ತೂರಿನ ರೇಸ್‌ಕೋರ್ಸ್ ಬಳಿಯ ಕ್ಯಾಂಪ್ ಆಫೀಸ್ ಬಳಿ ಅವರು ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಬೆಳಗ್ಗೆ ಜಾಗಿಂಗ್ ಗೆ ಹೋಗಿದ್ದ ವಿಜಯ್‌ ಕುಮಾರ್ 6.45ರ ವೇಳೆಗೆ ಕ್ಯಾಂಪ್ ಆಫೀಸ್ ಬಳಿ ಬಂದಿದ್ದರು. ನಂತರ ತಮ್ಮ ವೈಯಕ್ತಿಕ ಅಂಗರಕ್ಷಕ ಅಧಿಕಾರಿಗೆ ಪಿಸ್ತೂಲ್‌ ನೀಡುವಂತೆ ಕೇಳಿದ್ದು, ಆತ ಡಿಐಜಿಗೆ ಪಿಸ್ತೂಲ್ ನೀಡಿ ಕಚೇರಿಯಿಂದ ಹೊರಗೆ ಬಂದಿದ್ದಾರೆ.

Home add -Advt

ಅಂಗರಕ್ಷಕ ತೆರಳಿದ ಐದು ನಿಮಿಷದಲ್ಲಿ ಅವರು ಗುಂಡು ಹಾರಿಸಿಕೊಂಡಿದ್ದಾರೆ. ತಮಿಳುನಾಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button