Karnataka News

*ಡಿಜಿಟಲ್ ಮಾಧ್ಯಮದ ಹರಿಕಾರ ಎಸ್​​ಕೆ ಶ್ಯಾಮ್‌ಸುಂದರ್ ನಿಧನ*

ಪ್ರಗತಿವಾಹಿನಿ ಸುದ್ದಿ: ಕನ್ನಡದ ಹಿರಿಯ ಪತ್ರಕರ್ತ, ಕನ್ನಡ ಡಿಜಿಟಲ್ ಮಾಧ್ಯಮದ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಸ್​​ಕೆ ಶ್ಯಾಮ್‌ಸುಂದರ್ ಸೋಮವಾರ ರಾತ್ರಿ ನಿಧನರಾದರು. 

ಅವರಿಗೆ 72 ವರ್ಷ ವಯಸ್ಸಾಗಿತ್ತು. ಶ್ಯಾಮ್‌ಸುಂದರ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. 

ಎರಡೂವರೆ ದಶಕದ ಹಿಂದೆ ಕನ್ನಡದಲ್ಲಿ ಇನ್ನೂ ಬ್ಲಾಗ್ ಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದ ಕಾಲದಲ್ಲಿಯೇ ದಟ್ಸ್ ಕನ್ನಡ ಡಾಟ್ ಕಾಮ್ ಎಂಬ ವೆಬ್ ಸೈಟ್ ಮೂಲಕ ಸುದ್ದಿಗಳಿಗೆ ಕನ್ನಡದ ಬಾಗಿಲು ತೆರೆದಿಟ್ಟ ಹೆಗ್ಗಳಿಕೆ ಶ್ಯಾಮ್ ಅವರಿಗೆ ಸಲ್ಲುತ್ತದೆ. ಬಳಿಕ ದಟ್ಸ್ ಕನ್ನಡ ಜಾಲತಾಣ ಭಾರತಾದ್ಯಂತ ವಿವಿಧ ಭಾಷೆಗಳಲ್ಲಿ ಪ್ರಸಿದ್ದವಾಗಿತ್ತು.

ಅವಿವಾಹಿತರಾಗಿದ್ದ ಶ್ಯಾಮ್ ತಮ್ಮ ಅಪಾರ ಮಿತ್ರವರ್ಗ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಕನ್ನಡ ಪತ್ರಿಕಾರಂಗ ಅವರ ಅಗಲಿಕೆಗೆ ಸಂತಾಪ ಸೂಚಿಸಿದೆ. ಶ್ಯಾಮ್‌ಸುಂದರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

Home add -Advt

Related Articles

Back to top button