ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರಿಗೆ ಅಮೃತ ಮಹೋತ್ಸವ ನಿಮಿತ್ತ ಬೆಳಗಾವಿ, ಚಿಕ್ಕೋಡಿ, ಅಂಕಲಿ ಸುತ್ತಮುತ್ತಲಿನ 28ಕ್ಕೂ ಹೆಚ್ಚು ಗ್ರಾಮಗಳ ಪಂಢರಪುರ ಯಾತ್ರೆಗೆ ಹೋಗುವ ದಿಂಡಿಯ ಸುಮಾರು 500 ಭಕ್ತಾದಿಗಳು ಶನಿವಾರ ಜರುಗಿದ ಡಾ.ಕೋರೆಯವರ ಅಮೃತ ಮಹೋತ್ಸವ¸ ಸಮಾರಂಭದಲ್ಲಿ ಪಾದಯಾತ್ರೆಯ ಮೂಲಕವೇ ಬೆಳಗಾವಿಗೆ ಆಗಮಿಸಿ ಡಾ. ಕೋರೆಯವರಿಗೆ ಶುಭ ಕೋರಿ ಅಭಿನಂದಿಸಿದರು.
ಈ ದಿಂಡಿ ಯಾತ್ರಾರ್ಥಿಗಳು ಅಂಕಲಿಯ ಸ್ವಾತಂತ್ರ್ಯ ಸೇನಾನಿ ಬಸವಪ್ರಭು ಕೋರೆಯವರ
ಕಾಲದಿಂದಲೂ ಅಂಕಲಿಯ ಗ್ರಾಮಕ್ಕೆ ಆಗಮಿಸಿ ಸ್ವಲ್ಪದಿನಗಳವರೆಗೆ ಅಲ್ಲಿಯೇ ಭಕ್ತಿಯ ಆರಾಧಾನೆ ಮಾಡಿ ಪಂಡರಪುರಕ್ಕೆ ಭಕ್ತಿಸೇವೆಗೆ ತೆರಳುತ್ತ ಬಂದಿದ್ದಾರೆ. ಹಿಂದೆಯೂ ಬಸವಪ್ರಭು ಕೋರೆ ಅವರು ಭಕ್ತರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದರು. ಇಂದು ಆ ಕಾರ್ಯವನ್ನು ಡಾ.ಪ್ರಭಾಕರ ಕೋರೆಯವರು ನಿಭಾಯಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ದಿಂಡಿಯ ಪ್ರಮುಖರಾದ ಯಳ್ಳೂರಿನ ಧಾಮಣೆ ಕೆರವಾಡ್ಕರ್, ಅಜಿತ ಪಾಟೀಲ, ಅಂಬೇವಾಡಿಯ ಕುಲದೀಪ ತರಳೆ, ಕುದ್ರಿಮನಿಯಿಂದ ಮಲ್ಲಪ್ಪಾ
ಪಾಟೀಲ, ಅರ್ಜುನ ಜಾಂಬೋಟ್ಕರ್, ನಿಂಗಪ್ಪಾ ಬಾಬುರಾವ್ ಪಾಟೀಲ, ಮುತಗಿಯ ಶಾಮರಾವ್ ಪಾಟೀಲ, ಮಾರ್ಗದರ್ಶಕರಾದ ಬೆಳಗಾವಿಯ ಪ್ರೊ. ಎ.ಎ.ಘೋರ್ಪಡೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಂದಿಗುಂದ ಗ್ರಾಮ ಪಂ ಉಪಚುನಾವಣೆ; ಎಂಟು ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ