Latest

ಕಾರು ಚಾಲಕನಿಂದಲೇ ನಿರ್ಮಾಪಕನ ಮನೆಗೆ ಕನ್ನ!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ರಮೇಶ್ ಕಶ್ಯಪ್ ಮನೆ ಕಳ್ಳತನ ಪ್ರಕರಣ ಸಂಬಂಧ ಇದೀಗ ಬೆಂಗಳೂರು ಪೊಲಿಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ನಿರ್ಮಾಪಕರ ಕಾರು ಚಾಲಕನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಬಂಧಿತರನ್ನು ಚಂದ್ರಶೇಖರ್ (32), ಅಭಿಷೇಕ್ (34) ಎಂದು ಗುರುತಿಸಲಾಗಿದೆ. ಜುಲೈ 10ರದು ರಮೇಶ್ ಕಶ್ಯಪ್ ಮನೆಯಲ್ಲಿ ಕಳ್ಳತನವಾಗಿತ್ತು. ನಕಲಿ ಕೀ ಬಳಸಿ 3 ಲಕ್ಷ ರೂಪಾಯಿ ನಗದು ಹಾಗೂ 710 ಗ್ರಾಂ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದರು. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ರಮೇಶ್ ಕಾರು ಚಾಲಕ ಚಂದ್ರಶೇಖರ್ ಎಂಬಾತನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಅಸಲಿ ಕೀ ತೆಗೆದುಕೊಂಡು ಹೋಗಿ ನಕಲಿ ಕೀ ತಯಾರಿಸಿ ತನ್ನ ಸ್ನೇಹಿತನಿಂದ ಕೃತ್ಯ ಎಸಗಿಸಿದ್ದಾನೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು

Home add -Advt

Related Articles

Back to top button