Kannada NewsLatest

ವೀಡಿಯೋ, ದಾಖಲೆ ಸೃಷ್ಟಿಸಿದ ದಿ ಲಯನ್ ಕಿಂಗ್

ದಾಖಲೆ ಸೃಷ್ಟಿಸಿದ ದಿ ಲಯನ್ ಕಿಂಗ್

ಪ್ರಗತಿವಾಹಿನಿ ಸುದ್ದಿ : 1994 ರ ಚಲನಚಿತ್ರ ದಿ ಲಯನ್ ಕಿಂಗ್ ಅನ್ನು ರೀಮೇಕ್ ಮಾಡಿ 2019 ರಲ್ಲಿ ಬಿಡುಗಡೆ ಮಾಡಲಾಯಿತು. ಜುಲೈ 18 ರಂದು ಬಿಡುಗಡೆಯಾದ ಈ ಚಿತ್ರವು ಹಲವಾರು ದಾಖಲೆಗಳನ್ನು ಗಳಿಸಿತು. ಆನಿಮೇಷನ್ ವಿಭಾಗದಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ವಿಶ್ವದಾದ್ಯಂತ 1.3 ಬಿಲಿಯನ್ ಗಳಿಸಿದೆ. ಇದು ನವ ದಾಖಲೆ ಎಂದು ಹೇಳಬೇಕು. ಅನಿಮೇಷನ್ ಕ್ಷೇತ್ರದಲ್ಲಿ ಈ ಮಟ್ಟದ ಸಿನೆಮಾ ದಾಖಲೆ ಅದ್ಭುತವಾಗಿದೆ. ಈ ದಾಖಲೆಯನ್ನು ಈ ಹಿಂದೆ ಪ್ರೊಜೆನ್ ಪಡೆದಿತ್ತು. ಆ ಸಮಯದಲ್ಲಿ ಈ ಚಲನಚಿತ್ರವು 1.2 ಬಿಲಿಯನ್ ಗಳಿಸಿತ್ತು.  ದಾಖಲೆ ಸೃಷ್ಟಿಸಿದ ದಿ ಲಯನ್ ಕಿಂಗ್

ಸಧ್ಯ ದಿ ಲಯನ್ ಕಿಂಗ್ ಚಿತ್ರ ಭಾರತದಲ್ಲಿಯೂ ದೊಡ್ಡ ಹಿಟ್ ಆಗಿದೆ. ಭಾರತದಲ್ಲಿ, ಲಯನ್ ಕಿಂಗ್ ಎಲ್ಲಾ ಭಾಷೆಗಳಲ್ಲಿ ರೂ. 178 ಕೋಟಿ ರೂ. ಗಳಿಸಿ ಹೊಸ ದಾಖಲೆ ಸೃಷ್ಟಿಸಿದೆ. ಇತ್ತೀಚಿನ ಅವೆಂಜರ್ಸ್ ದಿ ಎಂಡ್‌ಗೇಮ್ ನಂತರ ಲಯನ್ ಕಿಂಗ್ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.

‘ಲಯನ್ ಕಿಂಗ್’ ವಿಎಫ್‌ಎಕ್ಸ್ ಮೇಲ್ವಿಚಾರಕ ರಾಬ್ ಲೆಗಾಟೊ ಎಚ್‌ಪಿಎ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಲಾಸ್ ಏಂಜಲೀಸ್‌ನ ಸ್ಕಿರ್‌ಬಾಲ್ ಸಾಂಸ್ಕೃತಿಕ ಕೇಂದ್ರದಲ್ಲಿ ನವೆಂಬರ್ 21 ರಂದು ನಡೆಯಲಿರುವ 14 ನೇ ವಾರ್ಷಿಕ ಎಚ್‌ಪಿಎ ಪ್ರಶಸ್ತಿ ಸಮಾರಂಭದಲ್ಲಿ ಜಾನ್ ಫಾವ್ರೂ ಅವರ ದಿ ಲಯನ್ ಕಿಂಗ್‌ನಲ್ಲಿ ಇತ್ತೀಚೆಗೆ ತೋರಿದ ಕೈಚಳಕಕ್ಕೆ ಹಾಲಿವುಡ್ ಪ್ರೊಫೆಷನಲ್ ಅಸೋಸಿಯೇಷನ್‌ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಈ ಹಿಂದೆ ಅವರು ‘ಟೈಟಾನಿಕ್,’ ‘ಹ್ಯೂಗೋ’ ಮತ್ತು ‘ದಿ ಜಂಗಲ್ ಬುಕ್’ ಗಾಗಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button