Latest

ಎರಡು ದಿನಗಳಲ್ಲಿ ಭಿನ್ನಮತ ಶಮನ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ ಹುಬ್ಬಳ್ಳಿ: ಇನ್ನೆರಡು ದಿನಗಳಲ್ಲಿ ಭಿನ್ನಮತದ ಸಮಸ್ಯೆ ಸಮಸ್ಯೆ ಶಮನಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನೆಹರೂ ಓಲೇಕಾರ್ ಮಾಡಿರುವ ಆರೋಪಗಳಿಗೆ ದಾಖಲೆ ನೀಡಲಿ‌, ಪ್ರಕರಣವೊಂದರಲ್ಲಿ ಸ್ವತಃ ನೆಹರೂ ಒಲೆಕಾರ್ ಅವರ ಅಪರಾಧ ಸಾಬೀತಾಗಿದೆ” ಎಂದರು.

ಬಹುಮತದ ವಿಶ್ವಾಸ:
“ರಾಜ್ಯದಲ್ಲಿ ಚುನಾಚಣೆ ಕಣ ಈಗಾಗಲೇ ಸಿದ್ಧವಾಗಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯುವ ವಿಶ್ವಾಸವಿದೆ. ಉಳಿದ ಕ್ಷೇತ್ರಗಳಿಗೆ ಇನ್ನೆರಡು ದಿನಗಳಲ್ಲಿ ಕೇಂದ್ರ ಚುನಾವಣೆ ಸಮಿತಿ ಅಭ್ಯರ್ಥಿಗಳನ್ನು ನಿರ್ಧರಿಸಲಿದ್ದು, 12 ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ಕಾಂಗ್ರೆಸ್ ಗೆ ಗೆಲ್ಲುವ ಶಕ್ತಿ ಇಲ್ಲ” ಎಂದರು.

ಶೆಟ್ಟರ್ ಮನವೊಲಿಕೆ ಪ್ರಯತ್ನ:

“ಜಗದೀಶ ಶೆಟ್ಟರ್ ಅವರ ಮನವೊಲಿಕೆಗೆ ಸತತ ಪ್ರಯತ್ನ ಮುಂದುವರಿದಿದ್ದು ನಿನ್ನೆ ಧರ್ಮೇಂದ್ರ ಪ್ರಧಾನ ಅವರ ಬಳಿ ಚರ್ಚಿಸಲಾಗಿದೆ. ಶೆಟ್ಟರ್ ಅವರದ್ದು, ಜನಸಂಘ ಕಾಲದಿಂದ ಒಂದೇ ಧೋರಣೆ ನಂಬಿ ಬಂದ ಮನೆತನ. ಬಿಜೆಪಿಗೆ ಅವರು ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡಿದ್ದು, ಫಲಕಾರಿಯಾಗುವ ವಿಶ್ವಾಸವಿದೆ” ಎಂದರು.

ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಸಿಎಂ ಅವರೇ ಕಾರಣವೆಂಬ ವದಂತಿ ತಳ್ಳಿಹಾಕಿದ ಬೊಮ್ಮಾಯಿ, “ಅದನ್ನು ಯಾರೂ ನಂಬಬಾರದು” ಎಂದರು.

https://pragati.taskdun.com/satish-jarakiholicampain-vehiclesiddaramaiah/
https://pragati.taskdun.com/vidhanasabha-electioncongress-candidate3rd-list/
https://pragati.taskdun.com/siddaramaiahk-s-eshwarappajagadish-shettarreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button