Belagavi NewsBelgaum NewsKannada NewsKarnataka News

ದಿಕ್ಕು ತಪ್ಪಿಸುವ, ಕಲೆಕ್ಷನ್ ಬಜೆಟ್: ಜೊಲ್ಲೆ ದಂಪತಿ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಗ್ಯಾರಂಟೀ ಯೋಜನೆಗಳ ಜಾರಿಗೆ ಸ್ಪಷ್ಟತೆ ನೀಡದ, ಆರ್ಥಿಕ ಸಂಪನ್ಮೂಲದ ಕ್ರೋಡಿಕರಣದ ಬಗ್ಗೆ ನಿಖರ ಮಾಹಿತಿ ಒದಗಿಸದ, ಉದ್ಯಮ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನವಿಲ್ಲದ, ನಿರುದ್ಯೋಗ ನಿವಾರಣೆಗೆ ಯಾವುದೇ ಭರವಸೆ ನೀಡದ, ಶಿಕ್ಷಣ ಕ್ಷೇತ್ರವನ್ನು ದಿಕ್ಕು ತಪ್ಪಿಸುವ, ಜನವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಬಜೆಟ್’ಅನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ ಎಂದು ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಸುಳ್ಳು ಭರವಸೆಗಳನ್ನು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಭರಸೆಗಳನ್ನು ಮೊದಲು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಲೆಕ್ಷನ್ ಬಜೆಟ್ – ಅಣ್ಣಾ ಸಾಹೇಬ ಜೊಲ್ಲೆ

ವಿವೇಚನೆ ಇಲ್ಲದೆ ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಕಲೆಕ್ಷನ್ ಬಜೆಟ್ ಇದಾಗಿದೆ. ಒಬ್ಬರ ಕಡೆಯಿಂದ ಕಸಿದು ಇನ್ನೊಬ್ಬರಿಗೆ ಕೊಡುವುದು ಅಷ್ಟೇ ಕಾಂಗ್ರೆಸ್ ಸರಕಾರದ ಉದ್ದೇಶ ಎಂದು ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ಹೇಳಿದ್ದಾರೆ.

Home add -Advt

ವಿವಿಧ ತೆರಿಗೆಗಳನ್ನು ಏರಿಸಿ ರಾಜ್ಯದ ಜನರ ಮೇಲೆ ಭಾರ ಹೆಚ್ಚಿಸಿದ್ದೆ ಈ ಬಜೆಟ್‌ನ ಸಾಧನೆ. ಆಸ್ತಿ ನೊಂದಣಿ ಶುಲ್ಕ ಹೆಚ್ಚಿಸಿ ಜನಸಾಮಾನ್ಯರ ಮನೆ ಕೊಳ್ಳುವ ಕನಸಿಗೆ ಕೊಳ್ಳಿ ಇಡಲಾಗಿದೆ. ಸಾಮಾನ್ಯ ಜನ ಬಳಸುವ ಸ್ಕೂಟರ್, ಬೈಕ್ ಮತ್ತು ಬೇಸಿಕ್ ಕಾರುಗಳ ಮೇಲೆಯೂ ತೆರಿಗೆ ಹೊರೆ ಹೊರಿಸಿ ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಬದುಕನ್ನೆ ದುಸ್ತರಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Related Articles

Back to top button