Kannada NewsKarnataka NewsLatest

ದಿನಸಿ, ಆಹಾರದ ಕಿಟ್ ವಿತರಣೆ: ನಿಸ್ವಾರ್ಥ ಸೇವೆ ಎಂದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಶುಕ್ರವಾರ ಆಟೋ ಚಾಲಕರಿಗೆ ರೇಷನ್ ಕಿಟ್ ಗಳನ್ನು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
ಈ ಕೊರೋನಾ ಸಂದರ್ಭದಲ್ಲಿ ಯಾವುದೇ ದುಡಿಮೆಯಿಲ್ಲದೆ ಜನ ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಿಂಚಿತ್ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಲಕ್ಷ್ಮಿ ತಾಯಿ ಫೌಂಡೇಶನ್  ಈ ನೆರವು ನೀಡುತ್ತಿದೆ. ಆಸ್ಪತ್ರೆಯಲ್ಲಿರುವ ಎಷ್ಟೋ ರೋಗಿಗಳಿಗೆ, ಅವರ ಸಹಾಯಕರಿಗೆ ಆಹಾರ, ನೀರು ಸಿಗುತ್ತಿಲ್ಲ. ಹಾಗಾಗಿ ಅವರಿಗೆ ಆಹಾರದ ಕಿಟ್ , ನೀರಿನ ಬಾಟಲ್, ಮಾತ್ರೆಯ ಕಿಟ್ ಗಳು, ಮಾಸ್ಕ್, ಸ್ಯಾನಿಟೈಜರ್ ಮುಂತಾದ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
  ಯಾವುದೇ ರಾಜಕಾರಣ, ಪ್ರತಿಷ್ಠೆ, ಸ್ವಾರ್ಥ ಇಲ್ಲದೆ ಬಡವರ ಕಣ್ಣೀರು ಒರೆಸುವ ಏಕೈಕ ಉದ್ದೇಶದಿಂದ ಈ ಸೇವೆಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬರಲಿ, ಅಂತವರಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದರಲ್ಲಿ ರಾಜಕೀಯ ಹುಡುಕಬೇಡಿ ಎಂದು ಅವರು ವಿನಂತಿಸಿದ್ದಾರೆ.
ಈ ಹಿಂದೆ ಕೂಡ ಪ್ರವಾಹದ ಸಂದರ್ಭದಲ್ಲಿ, ಕೊರೋನಾದ ಮೊದಲ ಅಲೆಯ ಸಂದರ್ಭದಲ್ಲಿ ಲಕ್ಷ್ಮಿ ತಾಯಿ ಫೌಂಡೇಶನ್ ಮಾಡಿದ ಜನ ಸೇವೆಯನ್ನು ಲಕ್ಷಾಂತರ ಜನ ಪ್ರಶಂಸಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಅಂತವರಿಗೆಲ್ಲ ಧನ್ಯವಾದ ಸಲ್ಲಿಸುತ್ತ, ಆದಷ್ಟು ಶೀಘ್ರ ಜನರು ಈ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button