
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪವಿತ್ರ ರಂಜಾನ ಹಬ್ಬದ ಪ್ರಯುಕ್ತ ವಿಧವೆಯರಿಗೆ, ವಿಶೇಷ ಚೇತನ ಹಾಗೂ ಬಡ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಇಂದು ಬೆಳಗಾವಿ ಅಜಾದ್ ನಗರದಲ್ಲಿ ಹಿಂದೆ ಕೆ ಫರೀಶ್ತೆ ಪೌಂಡೇಶನ್ ವತಿಯಿಂದ 120 ಕ್ಕೂ ಹೆಚ್ಚು ಮಹಿಳೆಯರಿಗೆ 1600-1800 ಮೌಲ್ಯದ ದಿನಸಿ ಕಿಟ್ಟ ವಿತಣೆ ಮಾಡಲಾಗಿದೆ. ಈ ಕಿಟ್ ನಲ್ಲಿ ಕಾಜು, ಬದಾಮ, ಖಜುರ್, ಜೋಳ, ಅಕ್ಕಿ, ಬೆಳೆ, ಉಪ್ಪು, ಶಾವಿಗೆ, ಸೇರಿದಂತೆ ಅನೇಕ ಗೃಹಪಯೋಗಿ ವಸ್ತುಗಳು ಇವೆ.
ರಂಜಾನ ಹಬ್ಬದ ಸಂದರ್ಭದಲ್ಲಿ ಯಾರು ಹಬ್ಬ ಆಚರಣೆ ಮಾಡಲಾರದೆ ಇರಬಾರದು ಎಂಬ ಉದ್ದೇಶದಿಂದ ದಿನಸಿ ಕಿಟ್ ವಿತಣೆ ಮಾಡಲಾಗಿದೆ.