Belagavi NewsBelgaum NewsKannada NewsKarnataka News

*ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸನ್ 2023-24ರ ಹಂಗಾಮಿನಲ್ಲಿ ಹುದಲಿಯ ಬೆಳಗಾಂ ಸುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತಗೆ ತಾವು ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. (ಅರ್ಧಕೆ.ಜಿ)ಯಂತೆ ಸಕ್ಕರೆಯನ್ನು ಪ್ರತಿ ಕಿ.ಗ್ರಾಂ.ಗೆ ರೂ. 20 ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಿರ್ಧರಿಸಲಾಗಿದೆ. 

ಆದ್ದರಿಂದ ಸನ್ 2023-24 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಕ್ಕರೆಯನ್ನು ಜುಲೈ 22 ರಂದು ಬೆಳಗಾಂ ಶುಗರ್ಸ ಪ್ರೈಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ ವಿತರಿಸಲಾಗುತ್ತದೆ.

ಕಬ್ಬು ಪೂರೈಸಿದ ಎಲ್ಲ ರೈತರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರಗಳನ್ನು ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರು ಪಡಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 

ಮುಂಬರುವ ದಿನಗಳಲ್ಲಿ ಎಲ್ಲ ರೈತರಿಗೆ ಒಳ್ಳೆಯ ಗುಣಮಟ್ಟದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸಿ, ಬರುವ ಹಂಗಾಮನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ವಿನಂತಿಸುತ್ತೇವೆ. ಹಿರಿಯ ಉಪಾಧ್ಯಕ್ಷ ಎಲ್.ಆರ್.ಕಾರಗಿ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button