Belagavi NewsBelgaum NewsKannada NewsKarnataka News

*ಗಂಡು ಶಿಶುವಿಗೆ “ಯತೀನ್” ಎಂದು ನಾಮಕರಣ ಮಾಡಿದ ಜಿಲ್ಲಾಧಿಕಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಿಶೇಷ ದತ್ತು ಕೇಂದ್ರದಲ್ಲಿ ದಾಖಲಾಗಿರುವ 2 ತಿಂಗಳಿನ ನವಜಾತ ಗಂಡು ಶಿಶುವಿಗೆ ಜೂನ್ 5 ಶುಕ್ರವಾರದಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಶಾಸ್ತ್ರೋಕ್ತವಾಗಿ “ಯತೀನ್” ಎಂಬ ಹೆಸರಿನ ಮೂಲಕ ನಾಮಕರಣ ಮಾಡಿದರು.

ಜಿಲ್ಲಾಧಿಕಾರಿಗಳು ಮಗುವಿಗೆ ಹೆಸರಿಡುವ ಮೂಲಕ ಮಗುವಿನ ಆರೈಕೆ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿ, ಮಗುವಿನ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. 

Home add -Advt

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಎಂ. ಎನ್. ಚೇತನ ಕುಮಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಮೂರ್ತಿ ಕೆ.ವಿ. ಸೇರಿದಂತೆ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button