*ಸೋನಿಯಾ ನಾಪತ್ತೆ: ಪತ್ತೆಗೆ ಪೋಷಕರ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ವಡಗಾವಿ ನಾಝರ ಕ್ಯಾಂಪ 3ನೇ ಕ್ರಾಸ್ ನಿವಾಸಿ ಸೋನಿಯಾ ಶಿರಾಜ ಮುಲ್ಲಾ ಎಂಬ 19 ವರ್ಷದ ಯುವತಿ ಜೂನ್ 1 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಯಿಂದ ವಾಕಿಂಗ್‌ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಯುವತಿಯ ವಿವರ: 5 ಪೂಟ್ ಎತ್ತರ, ಗುಂಡು ಮುಖ, ಉದ್ದ ಮೂಗು, ಸದೃಡ ಮೈಕಟ್ಟು, ಗೋದಿಗೆಂಪು ಮೈಬಣ್ಣ, ನೀಲಿ ಬಣ್ಣದ ನೈಟಿ, ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾಳೆ ಹಾಗೂ ಹಿಂದಿ, ಮರಾಠಿ, ಕನ್ನಡ, ಬಂಗಾಳಿ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 0831-240523, ಶಹಾಪೂರ ಪೊಲೀಸ ಠಾಣೆ ಬೆಳಗಾವಿ ನಗರ ದೂರವಾಣಿ ಸಂಖ್ಯೆ 0831-2405244, ಪೊಲೀಸ್ ಇನ್ಸ್‌ಪೆಕ್ಟರ್ ಶಹಾಪೂರ ಪೊಲೀಸ ಠಾಣೆ ಬೆಳಗಾವಿ ನಗರ ಮೋಬೈಲ್ ಸಂಖ್ಯೆ 9480804046 ಗೆ ಸಂಪರ್ಕಿಸಬಹುದಾಗಿದೆ ಎಂದು ಶಹಾಪೂರ ಪೊಲೀಸ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

