Kannada NewsKarnataka News

ಯಡಿಯೂರಪ್ಪ ಜಿಲ್ಲಾ ಪ್ರವಾಸ ಮತ್ತಿತರ ಪ್ರಮುಖ ಸುದ್ದಿಗಳು

ಗುರುವಾರ ಬೆಳಗಾವಿಗೆ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ–   ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ಅವರು ಅಕ್ಟೋಬರ್ ೩ ರಂದು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಗುರುವಾರದಂದು ಸಂಜೆ ೪ ಗಂಟೆಗೆ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಕೈಗೊಳ್ಳಲಿದ್ದಾರೆ. ನಂತರ ಸರ್ಕಾರಿ ವಸತಿಗೃಹದಲ್ಲಿ ವಾಸ್ತವ್ಯ ಮಾಡುವರು.
ಅಕ್ಟೋಬರ್ ೪ ಶುಕ್ರವಾರದಂದು ಬೆಳಿಗ್ಗೆ ೯.೩೦ಕ್ಕೆ ಸಾರ್ವಜನಿಕ ಭೇಟಿ ಮತ್ತು ಕುಂದುಕೊರತೆಗಳನ್ನು ಆಲಿಸುವರು. ನಂತರ ೧೦.೩೦ಕ್ಕೆ ಅಥಣಿ ತಾಲೂಕು ಮತ್ತು ಇತರೆ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಹಾಗೂ ಪರಿಹಾರ ಕೇಂದ್ರಗಳ ಪರಿಶೀಲನೆ ನಡೆಸಲಿದ್ದಾರೆ.
ಮಧ್ಯಾಹ್ನ ೨ ಗಂಟೆ ಅಥಣಿಯಿಂದ ರಸ್ತೆ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಪರಿಶೀಲನೆ ಕೈಗೊಳ್ಳಲಿದ್ದಾರೆ.

 ಲತಾ ಮಂಗೇಶ್ಕರ್ ಗೌರವಾರ್ಥ ಸಂಗೀತ ಕಾರ್ಯಕ್ರಮ

ಸಂಗೀತ ಕ್ಷೇತ್ರದ ಅಪ್ರತಿಮ ಪ್ರತಿಭೆ ಭಾರತದ ಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಗೌರವಾರ್ಥ ಬೆಳಗಾವಿಯ ಕೆಎಲ್‌ಇ ಸಂಗೀತ ಶಾಲೆಯಲ್ಲಿ ‘ಲತಾ ಗೀತೆಗಳ ವಿಶೇಷ ಕಾರ್ಯಕ್ರಮ’ವನ್ನು ಅ.೧ರ ಮಂಗಳವಾರ ಆಯೋಜಿಸಲಾಗಿದೆ.
ನೆಹರೂ ನಗರದ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಸಂಗೀತ ವಿದ್ಯಾಲಯದ ಮಹಡಿಯಲ್ಲಿ ಸಂಜೆ ೪.೩೦ ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರಿಗೆ ಉಚಿತ ಪ್ರವೇಶ ನೀಡಲಾಗುವುದು
ಇದೇ ಸಂದರ್ಭದಲ್ಲಿ ಲತಾಜಿ ಅವರ ಅವಿಸ್ಮರಣೀಯ ಮರೆಯಲಾಗದ ಹಳೇ ಚಿತ್ರಗೀತೆಗಳ ವೀಡಿಯೋ ಪ್ರದರ್ಶನವೂ ನಡೆಯಲಿದೆ.

ಅಕ್ಟೋಬರ ೩ ರಂದು ವಿದ್ಯುತ್ ನಿಲುಗಡೆ

ಯು ಜಿ ಕೇಬಲ್ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ೧೧೦ ಕೆ.ವ್ಹಿ. ವಡಗಾವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ-೪ ಬಾಝಾರಗಲ್ಲಿ ಪೂರಕದ ಮೇಲೆ ಬರುವ ಜೆಡಗಲ್ಲಿ, ಆಳವಾನ ಗಲ್ಲಿ, ಮಂಗೈನಗರ, ಪಾಟೀಲ್‌ಗಲ್ಲಿ, ಯರಮಾಳರೋಡ, ತೆಗ್ಗಿನಗಲ್ಲಿ, ಚಾವಡಿಗಲ್ಲಿ, ಯಳ್ಳೂರ ರೋಡ, ನಜರ್‌ಕ್ಯಾಂಪ ೧ನೇ ಕ್ರಾಸ್ ದಿಂದ ೪ನೇ ಕ್ರಾಸ್ ವರೆಗೆ, ವಿಷ್ಣು ಗಲ್ಲಿ, ನೆಕಾರ ಕಾಲೂನಿ, ಕಾರಬಾರಗಲ್ಲಿ, ಬೊಜಗಲ್ಲಿ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ ೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ ೪ ರಂದು ವಿದ್ಯುತ್ ನಿಲುಗಡೆ

ಯು ಜಿ ಕೇಬಲ್ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ೧೧೦ ಕೆ.ವ್ಹಿ. ವಡಗಾವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ-೧೪ ಆದರ್ಶ ನಗರ ಪೂರಕದ ಮೇಲೆ ಬರುವ ಸಂಭಾಜಿ ನಗರ, ರನಜಿಂಜರ ಕಾಲೂನಿ, ಓಂಕಾರ ನಗರ, ಭಾಗ್ಯ ನಗರ ೮, ೯ ಮತ್ತು ೧೦ನೇ ಕ್ರಾಸ್, ಸರ್ವೂದಯ ಮಾರ್ಗ, ಆದರ್ಶನಗರ, ಪಠವರ್ದನ ಲೇಔಟ್, ಚಬ್ಬಿ ಲೇಔಟ್, ಸುಂಕೆ ಲೇಔಟ್, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ ೪ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.2 ರಂದು ಮಹಾತ್ಮಾ ಗಾ‌ಂಧೀಜಿ ಜಯಂತಿ

 ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಬುಧವಾರ(ಅ.2) ಮಹಾತ್ಮಾ ಗಾಂಧೀಜಿ ಜಯಂತಿಯನ್ನು ಏರ್ಪಡಿಸಲಾಗಿದೆ.
ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ವೀರಸೌಧದಲ್ಲಿ ಬೆಳಿಗ್ಗೆ 9.30 ಗಂಟೆಗೆ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಪ್ರಿಯ ಭಜನ್, ಕಿರುಚಿತ್ರ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ನಡೆಯಲಿದೆ.
ಇದೇ ಸಂಧರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನಸಾಧನೆ ಕುರಿತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗರತ್ನಾ ಪರಾಂಡೆ ಅವರು ಉಪನ್ಯಾಸ ನೀಡಲಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 ಅಂಚೆ ಲಕೋಟೆ ಬಿಡುಗಡೆ ಸಮಾರಂಭ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ೧೫೦ ನೇ ಜನ್ಮದಿನೋತ್ಸವ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ೧೧೫ ನೇ ಜನ್ಮದಿನೋತ್ಸವ ಹಾಗೂ ಹುದಲಿ ಗ್ರಾಮದ ೧೯೩೭ ರಲ್ಲಿ ವಾಸ್ತವ್ಯ ಮತ್ತು ಶ್ರಮದಾನದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವನ್ನು ಅಕ್ಟೊಂಬರ್ ೨ ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ವಾತಂತ್ರ್ಯ ಸೈನಿಕ್ ಉತ್ತರಾಧಿಕಾರಿಗಳ ಸಂಘ ಹಾಗೂ ಭಾರತೀಯ ಅಂಚೆ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಮತ್ತು ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಸದಸ್ಯರಾದ ರಾಜೇಂದ್ರ ಕಲಘಟಗಿ ಅವರ ಸಂಯೋಜಕತ್ವದಲ್ಲಿ ಟಿಳಕವಾಡಿಯ ವೀರಸೌಧದಲ್ಲಿ ಅಕ್ಟೊಂಬರ್ ೨ ರಂದು ಬುಧವಾರ ಮುಂಜಾನೆ ೯ ಘಂಟೆಗೆ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕರಾದ ಎಚ್.ಜಿ. ರಾಘವೇಂದ್ರ ಸುಹಾಸ, ಧಾರವಾಡದ ಅಂಚೆ ಸೇವೆಗಳ ನಿರ್ದೇಶಕರಾದ ಸನ್ನಾ ನಾಯ್ಕ, ಬೆಳಗಾವಿ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಂಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಕೆ.ಎಚ್.ಜಗದೀಶ, ಸಹಕಾರಿ ಸಂಘಗಳ ಉಪನಿಂಬಂಧಕರಾದ ಕೆ.ಎಲ್.ಶ್ರೀನಿವಾಸ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರಾದ ಎಸ್.ಡಿ.ಕುಲಕರ್ಣಿ, ಮಾಜಿ ಶಾಸಕರಾದ ಗುರುವರ್ಯ ಪಿ.ಬಿ. ನಂದಿಹಳ್ಳಿ ಹಾಗೂ ಸ್ವಾತಂತ್ರ್ಯ ಸೈನಿಕರು ಮತ್ತು ಮಾಜಿ ಅಧ್ಯಕ್ಷರಾದ ವಿಠಲರಾವ್ ಯಾಳಿಗಿ ಉಪಸ್ಥಿತರಿರುವರು.

 ಖಾದಿ ಮತ್ತು ಗ್ರಾಮೋದ್ಯೋಗ  ಸಂಘದಿಂದ ಗಾಂಧಿ ಜಯಂತಿ 

ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ ನಿಯಮಿತ ಹುದಲಿ ಅವರ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಜಯಂತಿ ನಿಮಿತ್ತವಾಗಿ ಸ್ವಚ್ಛತಾ ಅಭಿಯಾನ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟದ ಉದ್ಘಾಟನಾ ಸಮಾರಂಭವನ್ನು ಬೆಳಗಾವಿ ಕಿರ್ಲೋಸ್ಕರ ರಸ್ತೆ ಖಾದಿ ಭವನದಲ್ಲಿ ಅಕ್ಟೋಬರ ೨ ರಂದು ಏರ್ಪಡಿಸಲಾಗಿದೆ.
ಗದಗ ಡಂಬಳದ ಶ್ರೀ ಯಡೆಯೂರು ತೋಂಟದಾರ್ಯ ಸಂಸ್ಥಾನಮಠದ ಹಾಗೂ ನಾಗನೂರ ರುದ್ರಾಕ್ಷಿಮಠದ ಶ್ರೀ ಮನ್ನಿರಂಜನ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಚ.ಅಂಗಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಎಸ್.ಸಿ ಮಾಳಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜು, ಹುಬ್ಬಳ್ಳಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಿಭಾಗೀಯ ಕಚೇರಿಯ ನಿರ್ದೇಶಕರಾದ ಎಸ್.ಎಸ್.ತಾಂಬೆ ಹಾಗೂ ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕಸ್ತೂರಿ ಎಂ.ಕುಂಬಾರ ಉಪಸ್ಥಿತರಿರುವರು.

ಅ. ೨ ರಂದು ಮಾಂಸ ಮಾರಾಟ ಅಂಗಡಿಗಳು ಬಂದ್

ಗಾಂಧಿ ಜಯಂತಿ ನಿಮಿತ್ತ ಅಕ್ಟೋಬರ ೨ ರಂದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ, ಮಾಂಸ ಮಾರಾಟ ಅಂಗಡಿಗಳ ಮಾಲೀಕರುಗಳು ತಮ್ಮ ಅಂಗಡಿಗಳನ್ನು ಬಂದು ಮಾಡಿ ಸಹಕರಿಸುವಂತೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸದರಿ ದಿನದಂದು ಕಸಾಯಿಖಾನೆ, ಮಾಂಸಾಹಾರಿ ಅಂಗಡಿ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲಗಾರರ ವಿವರ ಅಪ್ಲೋಡ್ ಮಾಡಲು ಅ. ೫ ಕೊನೆಯ ದಿನ

ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ಜುಲೈ ೨೬, ೨೦೧೨ ರಿಂದ ಸಾಲ ಪಡೆದು ಮಾರ್ಚ ೩೧, ೨೦೧೯ ಕ್ಕೆ ಹೊಂದಿದ ಹೊರಬಾಕಿ ಯಲ್ಲಿ ಅಸಲು ಮತ್ತು ಬಡ್ಡಿ ಸೇರಿ ಗರಿಷ್ಟ ರೂ.೧ ಲಕ್ಷಗಳ ಮೊತ್ತವನ್ನು ಮನ್ನಾ ಮಾಡಲು ಅವಕಾಶವಿದ್ದು, ಸಾಲಗಾರರ ವಿವರಗಳನ್ನು  ಅಪ್ಲೋಡ್ ಮಾಡಲು ಅಕ್ಟೋಬರ ೫ ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ ಉದ್ಯಮಬಾಗ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೦೭೨೩೭, ೦೮೩೧-೨೪೪೩೨೪೬ ಇವರ ಕಚೇರಿಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button