Film & EntertainmentKannada NewsKarnataka NewsLatest
*ನಟಿ ದಿವ್ಯಾ ಸುರೇಶ್ ಹಿಟ್ & ರನ್ ಕೇಸ್: ಮಹಿಳೆಯ ಕಾಲು ಮುರಿತ*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟಿ ದಿವ್ಯಾ ಸುರೇಶ್ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಮಹಿಳೆ ಕಾರು ಮುರಿದಿದೆ. ಅಪಗ್ಘಾತವಾಗುತ್ತಿದ್ದಂತೆ ದಿವ್ಯಾ ಸುರೇಶ್ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಅಕ್ಟೋಬರ್ ೪ರಂದು ಬ್ಯಾಟರಾಯನಪುರ ಬಳಿ ಕಿರಣ್ ಅನಿತಾ ಹಾಗೂ ಇನ್ನೋಬ್ಬರು ಬೈಕ್ ನಲ್ಲಿ ತೆರಳುತ್ತಿದ್ದಾಗ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಬಂದ ದಿವ್ಯಾ ಸುರೇಶ್, ಬೈಕ್ ಗೆ ಕಾರು ಗುದ್ದಿದ್ದಾರೆ. ಘಟನೆಯಲ್ಲಿ ಅನಿತಾ ಕಾಲು ಮುರಿದಿದೆ. ಕಾರು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಕಿರಣ್ ಎಂಬುವವರು ದಿವ್ಯಾ ಸುರೇಶ್ ವಿರುದ್ಧ ದೂರು ನೀಡಿದ್ದಾರೆ.




