Belagavi NewsBelgaum NewsKannada NewsKarnataka NewsNational

*ಸತತ ಎರಡನೇ ದಿನವೂ ಏರಿದ ಚಿನ್ನದ ಬೆಲೆ*

ಪ್ರಗತಿವಾಹಿನಿ ಸುದ್ದಿ: ಚಿನ್ನದ ಬೆಲೆ ಇವತ್ತೂ ಏರಿಕೆಯಾಗಿದೆ. ನಿನ್ನೆ ಗ್ರಾಮ್‌ಗೆ 195 ರೂಪಾಯಿಯಷ್ಟು ಹೆಚ್ಚಿದ್ದ ಬಂಗಾರದ ದರ, ಇಂದು ಗುರುವಾರ ಮತ್ತೆ 105 ರೂಪಾಯಿ ಏರಿಕೆ ಕಂಡಿದೆ. ಇದರೊಂದಿಗೆ ಕೇವಲ ಎರಡೇ ದಿನಗಳಲ್ಲಿ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 300 ರೂಪಾಯಿಗಳಷ್ಟು ಹೆಚ್ಚಳವಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಸ್ವರ್ಣ ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ ಏರಿಕೆ ಕಂಡಿದ್ದು, ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.

Home add -Advt

ಭಾರತದಲ್ಲಿ ಪ್ರಸ್ತುತ 10 ಗ್ರಾಮ್ ತೂಕದ 22 ಕ್ಯಾರಟ್ ಚಿನ್ನದ ಬೆಲೆ 1,39,750 ರೂಪಾಯಿ ತಲುಪಿದೆ. ಇನ್ನು ಶುದ್ಧ ಚಿನ್ನ ಅಥವಾ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,52,460 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಗ್ರಾಮ್‌ಗೆ 5 ರೂಪಾಯಿ ಏರಿಕೆಯಾಗಿದ್ದು, ಪ್ರತಿ 100 ಗ್ರಾಮ್ ಬೆಳ್ಳಿ ಬೆಲೆ 27,000 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ 1,39,750 ರೂಪಾಯಿ ಇದ್ದರೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 27,000 ರೂಪಾಯಿ ಇದೆ. ವಿಶೇಷವೆಂದರೆ ತಮಿಳುನಾಡು ಮತ್ತು ಕೇರಳದ ಕೆಲವೆಡೆ ಬೆಳ್ಳಿ ಬೆಲೆ ಮತ್ತಷ್ಟು ಹೆಚ್ಚಿದ್ದು 100 ಗ್ರಾಮ್‌ಗೆ 27,500 ರೂಪಾಯಿ ದಾಖಲಾಗಿದೆ.’

Related Articles

Back to top button