
ಪ್ರಗತಿವಾಹಿನಿ ಸುದ್ದಿ: ಆರ್ ಎಸ್ಎಸ್ ಪ್ರಾರ್ಥನಾ ಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರಗೆ ಹಲವು ಕಾಂಗ್ರೆಸ್ ನಾಯಕರೆ ವಿರೋಧ ವ್ಯಕ್ತಪಡಿಸಿದ್ರು, ಆದರೆ ಇದೀಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ವಿರೋಧಿಸಿದ್ದಾರೆ.
ಈ ಘಟನೆ ಕರ್ನಾಟಕದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರು ಡಿ.ಕೆ ಶಿವಕುಮಾರ್ ನಡೆಯನ್ನು ಕಾಂಗ್ರೆಸ್ನ ದ್ವಂದ್ವ ನೀತಿಯ ಉದಾಹರಣೆ ಎಂದರೆ, ಕಾಂಗ್ರೆಸ್ನ ಕೆಲವರು ಇದನ್ನು ತಪ್ಪು ಎಂದಿದ್ದರು.
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು..?
ವಿಧಾನಸಭೆಯಲ್ಲಿ ಡಿಕೆಶಿ ಆರ್ಎಸ್ಎಸ್ ಗೀತೆಯನ್ನು ಹೇಳಬಾರದಿತ್ತು. ಡಿಕೆಶಿ ಆರ್ಎಸ್ಎಸ್ ಗೀತೆಯನ್ನು ಹಾಡಿ ತಪ್ಪು ಮಾಡಿದ್ದಾರೆ. ಈ ತಪ್ಪು ಆಗಬಾರದಿತ್ತು, ಆದರೆ, ಅವರು ಈಗ ಕ್ಷಮೆ ಕೇಳಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿಯಲಿ ಎಂದು ಆಶಿಸುತ್ತೇವೆ ಎಂದು ಖರ್ಗೆ ಹೇಳಿಕೆ ನೀಡಿದ್ದಾರೆ.