ಪ್ರಗತಿವಾಹಿನಿ ಸುದ್ದಿ: 2014ರಲ್ಲಿ ಎನ್‌ಡಿಎ ಸರ್ಕಾರ ಬರುವ ಮುನ್ನ ಚಿನ್ನದ ಬೆಲೆ 26-27 ಸಾವಿರ ರೂ ಆಗಿತ್ತು ಆದರೆ ಈಗ 70 ಸಾವಿರ ರೂ ದಾಟಿದೆ ಇದನ್ನು ಎಲ್ಲರೂ ಗಮನಿಸಬೇಕು. ಹೀಗೆಲ್ಲ ಇರುವಾಗ ಮಂಗಳಸೂತ್ರವನ್ನು ಕಸಿದವರು ಯಾರು? ಇಂತಹ ಹೇಳಿಕೆ ಅಸಹನೀಯ ಎಂದು ಪ್ರಧಾನಿ ಮೋದಿ ವಿರುದ್ಧ ಡಿಸಿಎಂ ಡಿಕೆಶಿವಕುಮಾರ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಲಖ್ನೌನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಸಲುವಾಗಿ ಬೇಕಾದಷ್ಟು ಭರವಸೆ ಕೊಟ್ಟಿದ್ದರು, ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ಸು ತರುವ ಭರವಸೆ, ಆದಾಯ ದುಪ್ಪಟ್ಟು ಇನ್ನೂ ಹಲವು ಆದರೆ ಒಂದೂ ಈಡೇರಿಲ್ಲ. ನಾವು ಬಡ ರೈತರ ಸಾಲ ಮನ್ನಾ ಮಾಡಿದ್ದೇವೆ ಆದರೆ ಮೋದಿಯಿಂದ ಇದು ಸಾಧ್ಯವಾಗಿಲ್ಲ’ಎಂದು ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದ ಹಲವರನ್ನು ಮಾತನಾಡಿಸಿದ್ದೇನೆ ಯಾವ ರೈತರಿಗೂ ಏನೂ ಲಾಭವಾಗಿಲ್ಲ, ಅಭಿವೃದ್ಧಿಯೂ ಇಲ್ಲ. 50 ಸಾವಿರ ಪೋಸ್ಟ್‌ಗೆ 6 ಲಕ್ಷ ಅಪ್ಲಿಕೇಶನ್ ಬರುತ್ತಿದೆ. ಅನೇಕ ಯುವಕರು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ. ದೇಶವನ್ನು ಕೇವಲ ಭಾವನಾತ್ಮಕ ಮಾತುಗಳಿಂದ, ಕೋಮುವಾದದಂತಹ ವಿಚಾರಗಳಿಂದ ಆಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಯುವಕರಿಗೆ ಉದ್ಯೋಗ, ಕೂಲಿ ಕಾರ್ಮಿಕರಿಗೆ ಖಚಿತ ಆದಾಯ, ಮಹಿಳೆಯರಿಗೆ ಧನ ಸಹಾಯ, ಹೀಗೆ ಅನೇಕ ಗ್ಯಾರೆಂಟಿಗಳನ್ನು ಯೋಚಿಸಿದ್ದು ಅಭಿವೃದ್ಧಿಗೆ ಪೂರಕವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ