GIT add 2024-1
Beereshwara 33

*ಹು-ಧಾ ಪೊಲೀಸ್ ಇಲಾಖೆಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ*

Anvekar 3
Cancer Hospital 2

ಪ್ರಗತಿವಾಹಿ‌ನಿ ಸುದ್ದಿ:  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಆಡಳಿತದಲ್ಲಿ ಬಿಗಿ ಹೋಗಿದೆ. ನೇಹಾ ಕೊಲೆಯಾದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಪೊಲೀಸರು ಎಚ್ಚರ ಇರಬೇಕಿತ್ತು. ನೇಹಾ ಕೊಲೆ ಪ್ರಕರಣವನ್ನು ಸರ್ಕಾರ ತುಂಬಾ ಸಹಜವಾಗಿ ತೆಗೆದುಕೊಂಡಿದೆ. ಇತ್ತೀಚಿನ ಘಟನೆ ನೋಡಿದರೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

Emergency Service

ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂಜಲಿ ಕೊಲೆ ಮಾಡಿದವರು, ಕೊಲೆ ಹಿಂದಿದ್ದವರಿಗೆ ಕಾನೂನು ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಸರ್ಕಾರ ನಡೆಸುವವರು ಬಿಗಿಯಾದ ಆಡಳಿತ ವ್ಯವಸ್ಥೆ ತರಬೇಕು.‌ ಆದರೆ ಒಂದಕ್ಕೊಂದು ಹೊಂದಾಣಿಕೆ ಇಲ್ಲದೇ ಇರುವುದರಿಂದ ಇಂತಹ ಘಟನೆ ನಡೆಯುತ್ತಿವೆ. ಇದೇ ರೀತಿ ವ್ಯವಸ್ಥೆ ಮುಂದುವರೆದರೇ ಇನ್ನೂ ಹೆಚ್ಚಿನ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಅವರು ಹೇಳಿದರು.

ಪೊಲೀಸ್ ಕಮೀಷನರ್ ವರ್ಗಾವಣೆ ಸರ್ಕಾರಕ್ಕೆ ಬಿಟ್ಟ ವಿಚಾರ, ಆದರೆ ಅವಳಿನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾಕಷ್ಟು ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಲಿದೆ. ಮುಂಜಾಗ್ರತೆ ವಹಿಸುವ ಅವಕಾಶ ಇದ್ದಾಗಲೂ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ಪೊಲೀಸ್ ಇಲಾಖೆ ವಿರುದ್ಧ ಶೆಟ್ಟರ್ ಕಿಡಿಕಾರಿದರು.

Laxmi Tai add
Bottom Add3
Bottom Ad 2