Kannada NewsKarnataka NewsLatest

ಸಿದ್ದರಾಮಯ್ಯ ಮನೆಗೆ ಲಕ್ಷ್ಮಣ ಸವದಿ ಕರೆತಂದ ಡಿ.ಕೆ.ಶಿವಕುಮಾರ, ಸುರ್ಜೇವಾಲ ಉಪಸ್ಥಿತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರಿಗೆ ತೆರಳಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಜೊತೆ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸುಮಾರು 2 ಗಂಟೆ ಚರ್ಚೆ ಬಳಿಕ ಈಗ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನೆಗೆ ಕರೆತರಲಾಗಿದೆ.

ಸಿದ್ದರಾಮಯ್ಯ ಮನೆಯಲ್ಲಿ ಮೂವರೂ ನಾಯಕರು ಸವದಿ ಜೊತೆಗೆ ಚರ್ಚಿಸುತ್ತಿದ್ದಾರೆ.

ಇಂದು ಬೆಳಗ್ಗೆ ಬೆಳಗಾವಿಯಿಂದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಜೊತೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಿರುವ ಲಕ್ಷ್ಮಣ ಸವದಿ ವಿಮಾನ ನಿಲ್ದಾಣದಿಂದ ರಹಸ್ಯ ಸ್ಥಳಕ್ಕೆ ತೆರಳಿದರು. ಅಲ್ಲಿ ಸುರ್ಜೇವಾಲ ಮತ್ತು ಡಿ.ಕೆ.ಶಿವಕುಮಾರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು.

ನಂತರ ಸಿದ್ದರಾಮಯ್ಯ ಅವರಿಗೂ ಭೇಟಿ ಮಾಡಿಸಲು ಕರೆ ತರಲಾಗಿದೆ. ಈಗ ಸುರ್ಜೇವಾಲ ಮನೆಯಲ್ಲಿ ಚರ್ಚೆ ಮುಂದುವರಿದಿದೆ.

Home add -Advt

ಲಕ್ಷ್ಮಣ ಸವದಿ ಏಪ್ರಿಲ್ 19ರಂದು ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

https://pragati.taskdun.com/mla-anila-benake-has-no-seat-in-congress/

Related Articles

Back to top button